- Advertisement -
- Advertisement -
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಬೆಂಗಳೂರು: ಪ್ರತಿಷ್ಠಿತ ಆಹಾರ ಮತ್ತು ಮಸಾಲಾ ಪದಾರ್ಥಗಳ ತಯಾರಿಕಾ ಎಂಟಿಆರ್ ಕಂಪೆನಿಯ 30 ಮಂದಿ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕಂಪೆನಿಯನ್ನು ಸೀಲ್ ಡೌನ್ ಮಾಡಲಾಗಿದೆ.
ನಗರದ ಬೊಮ್ಮಸಂದ್ರದಲ್ಲಿರುವ ಎಂಟಿಆರ್ ಕಂಪೆನಿಯ ಕಿಚನ್ ನಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಸಿಬ್ಬಂದಿಗೆ ಮೊದಲು ಕೊರೊನಾ ಕಾಣಿಸಿಕೊಂಡಿತ್ತು. ಬಳಿಕ ಹಂತ ಹಂತವಾಗಿ ಸುಮಾರು 30 ಮಂದಿಗೆ ಸಿಬ್ಬಂದಿಗೆ ಸೋಂಕು ತಗುಲಿದೆ. ಇನ್ನು 40 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕಂಪೆನಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಎಂಟಿಆರ್ ಕಂಪೆನಿ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಆದರೆ ಸೀಲ್ ಡೌನ್ ನಿಂದ ಕಂಪೆನಿಯಲ್ಲಿ ಉತ್ಪಾದನಾ ಕಾರ್ಯ ಸ್ಥಗಿತವಾಗಿದ್ದು, ಭಾರೀ ನಷ್ಟವಾಗುವ ಸಾಧ್ಯತೆಗಳಿವೆ.
- Advertisement -