- Advertisement -
- Advertisement -
ಮೂಡುಬಿದಿರೆ:ಮೀನು ವ್ಯಾಪಾರಿಯೋರ್ವ ಸ್ಥಳೀಯ ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿರುವ ಪ್ರಕರಣ ಮಾರ್ಪಾಡಿಯಲ್ಲಿ ನಡೆದಿದೆ.ಸ್ಥಳೀಯ ಮೀನು ವ್ಯಾಪಾರಿ ಆಸಿಫ್ ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಈಕೆಯ ಪೋಷಕರು ಕೂಲಿ ಕಾರ್ಮಿಕರಾಗಿದ್ದು ಆರೋಪಿ ಮೀನು ವ್ಯಾಪಾರಿಯಾಗಿದ್ದಾನೆ.ಬಂಧಿತ ಮೀನು ವ್ಯಾಪಾರಿ ಅಸೀಫ್ , ತಾನು ವಾಸವಿದ್ದ ಪರಿಸರದಲ್ಲೇ ವಾಸ್ತವ್ಯವಿದ್ದ ತಮಿಳು ಮೂಲದ ಕೂಲಿ ಕಾರ್ಮಿಕರೊಬ್ಬರ ಅಪ್ರಾಪ್ತ ವಯಸ್ಸಿನ ಮಗಳ ಜತೆ ಈತ ಪರಿಚಯ ಮಾಡಿಕೊಂಡು ಆಕೆಯನ್ನು ಪುಸಲಾಯಿಸಿ ಮನೆ ಹತ್ತಿರದ ಗುಡ್ಡೆಯಲ್ಲಿ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ.
ಈ ಕುರಿತು ಬಾಲಕಿಯ ಸಂತ್ರಸ್ತೆಯ ತಂದೆ ದೂರಿನಂತೆ ಆರೋಪಿಯನ್ನು ಪೊಲೀಸರು ಬಂಧಿಸಿ ಫೊಕ್ಸೊ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗೆ ನ್ಯಾಯಾಲಯ, ನ್ಯಾಯಾಂಗ ಬಂಧನ ವಿಧಿಸಿದೆ.
- Advertisement -