Saturday, June 28, 2025
spot_imgspot_img
spot_imgspot_img

ಮೂಡುಬಿದಿರೆ: ಖಾಸಗಿ ಕಾಲೇಜಿನ ಉದ್ಯೋಗಿ ನೇಣು ಬಿಗಿದು ಆತ್ಮಹತ್ಯೆ..!!

- Advertisement -
- Advertisement -

ಮೂಡುಬಿದಿರೆ: ಪ್ರತಿಷ್ಠಿತ ಖಾಸಗಿ ಕಾಲೇಜಿನ ಉದ್ಯೋಗಿಯೋರ್ವರು ಹಾಸ್ಟೆಲ್ ನ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಬಾಗಲಕೋಟೆಯ ನಿವಾಸಿ ಹನುಮಂತಪ್ಪ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಪ್ರಸ್ತುತ ಉದ್ಯೋಗದ ನಿಮಿತ್ತ ಮೂಡುಬಿದಿರೆ ಸಮೀಪ ವಾಸಿಸುತ್ತಿದ್ದರು.

ಇಲ್ಲಿಯೇ ಪ್ರತಿಕೋದ್ಯಮ ವ್ಯಾಸಂಗ ಮಾಡಿದ್ದ ಆತ ಜನವರಿಯಲ್ಲಿ ಕಾಲೇಜಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಹನುಮಂತಪ್ಪನ ಹೆತ್ತವರು ಮೂಡುಬಿದಿರೆಗೆ ಬಂದ ನಂತರ ಮೃತದೇಹವನ್ನು ಅವರು ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!