Friday, May 3, 2024
spot_imgspot_img
spot_imgspot_img

ಬೇರ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್, ಬಹುಭಾಷಾ ನಟ ಸುಮನ್ ತಲ್ವಾರ್

- Advertisement -G L Acharya panikkar
- Advertisement -

ಬೆಳ್ಳಿಪರದೆಯ ಮೇಲೆ ಮಿಂಚಿ, ಕಡಲತಡಿಯ ಕಂಪನ್ನು ದೇಶಾದ್ಯಂತ ಪಸರಿಸಿದ ನಟ ಸುಮನ್

ಸುಮನ್ ತಲ್ವಾರ್ ಹತ್ತು ಭಾಷೆಗಳಲ್ಲಿ 700 ಅಧಿಕ ಚಿತ್ರಗಳಲ್ಲಿ ನಟಿಸಿದ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್. ತುಳುನಾಡಿನಲ್ಲಿ ಹುಟ್ಟಿದರೂ ಕನ್ನಡ, ತಮಿಳು, ತೆಲುಗು, ಹಿಂದಿ, ಒಡಿಸ್ಸಿ, ಭೋಜ್ ಪುರಿ, ಬಂಜಾರ, ಇಂಗ್ಲೀಷ್, ಮಲಯಾಳಂ ಸಿನಿಮಾಗಳಲ್ಲಿ ನಟನೆಯ ಮೂಲಕ ತಮ್ಮದೇ ಕಲಾಚಾತುರ್ಯ ತೋರಿಸಿದವರು.

ತಮಿಳುನಾಡಿನ ಮದ್ರಾಸ್‌ನಲ್ಲಿ ತುಳು ಮಾತನಾಡುವ ಕುಟುಂಬದಲ್ಲಿ 1959 ಆಗಸ್ಟ್ 28ರಂದು ಜನಿಸಿದರು. ಸುಮನ್ ತಲ್ವಾರ್ ಒಬ್ಬ ಭಾರತೀಯ ನಟ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ನಟನಾಗಿ ಹೆಸರುವಾಸಿಯಾಗಿದವರು.

ಪ್ರಮುಖವಾಗಿ ತೆಲುಗು ಮತ್ತು ತಮಿಳಿನಲ್ಲಿ ಪುರುಷ ನಾಯಕ ಮತ್ತು ಪಾತ್ರ ನಟನಾಗಿ ನಟಿಸಿದ ಸುಮನ್ ತಲ್ವಾರ್ ಕನ್ನಡ, ಮಲಯಾಳಂ ಮತ್ತು ಹಿಂದಿ ನಟಿಸಿ ಸೈ ಎನಿಸಿಕೊಂಡ ಬಹುಭಾಷಾ ನಟ. ಸುಮಾರು 4 ದಶಕಗಳ ವೃತ್ತಿಜೀವನದಲ್ಲಿ, ಅವರು 10 ಭಾಷೆಗಳಲ್ಲಿ 700 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು 1980 ಮತ್ತು 1990 ರ ದಶಕದಲ್ಲಿ ತೆಲುಗು ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದವರು ಸುಮನ್ ತಲ್ವಾರ್.

ತರಂಗಿಣಿ, ನೇತಿ ಭಾರತಂ, ಮತ್ತು ಸಿತಾರ ಸೇರಿದಂತೆ ತೆಲುಗಿನಲ್ಲಿ ಅವರು ಅನೇಕ ಆಕ್ಷನ್ ಮತ್ತು ರೋಮ್ಯಾಂಟಿಕ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸುಮನ್ ತೆಲುಗಿನಲ್ಲಿ ವೆಂಕಟೇಶ್ವರ, ಶಿವ ಮತ್ತು ರಾಮನಂತಹ ಪೌರಾಣಿಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರು 1993 ರಲ್ಲಿ ಬಾವ ಬಾವಮರಿದಿ ಚಿತ್ರಕ್ಕಾಗಿ ಅತ್ಯುತ್ತಮ ನಟನಿಗಾಗಿ ನಂದಿ ಪ್ರಶಸ್ತಿಯನ್ನು ಪಡೆದಿದ್ದಾರೆ. ತಮಿಳು ಚಲನಚಿತ್ರಗಳಾದ ಶಿವಾಜಿ ಮತ್ತು ಕುರುವಿನಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸುವ ಮೂಲಕ ನಟನೆಗೆ ಮರಳಿದರು. ಮಲಯಾಳಂ ಚಲನಚಿತ್ರ ಸಾಗರ್ ಅಲಿಯಾಸ್ ಜಾಕಿಯಲ್ಲಿ ಮುಖ್ಯ ಪ್ರತಿಸ್ಪರ್ಧಿಯಾಗಿ ನಟಿಸಿದರು. 2009ರಲ್ಲಿ ಏಷ್ಯಾನೆಟ್ ಫಿಲ್ಮ್ ಹಾನರ್ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

ಯಾವುದೇ ಗಾಡ್ ಫಾದರ್ ಇಲ್ಲದೇ ತಮಿಳು ಮತ್ತು ತೆಲುಗಿನಲ್ಲಿ 80-90ರ ದಶಕದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದ ಸುಮನ್ ತಲ್ವಾರ್, ನಾಯಕನಟನಾಗಿ, ಖಳನಟನಾಗಿ, ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಟಿಸಿ ಸಿನಿರಸಿಕರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.

ಇದೀಗ ಎಸ್.ಎಲ್. ವಿ ಬ್ಯಾನರ್‌ನಡಿಯಲ್ಲಿ ಉದ್ಯಮಿ ದಿವಾಕರ್ ದಾಸ್ ನೇರ್ಲಾಜೆ ನಿರ್ಮಾಣದ ವಿನು ಬಳಂಜ ನಿರ್ದೇಶನದ ‘ಬೇರ’ ಸಿನಿಮಾದಲ್ಲಿ ಸುಮನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಬೇರ’ ಟೈಟಲ್ ಹೊಂದಿರೋ ಅದ್ಭುತ ಸಿನಿಮಾ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಮೇ ತಿಂಗಳ ಅಂತ್ಯದೊಳಗೆ ಫಿಲ್ಮ್ ರಿಲೀಸ್ ಆಗುವ ಸಾಧ್ಯತೆ ಇದೆ. ಇದೀಗ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಸಿನಿಮಾ ಬಗೆಗಿನ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿದೆ. ವಿಭಿನ್ನ ಮತ್ತು ಸಖತ್ ಸ್ಟೋರಿ ಹೊಂದಿರೋ ಸಿನಿಮಾ ಅಂದ್ರೆ ಬೇರ. ಟೈಟಲ್ ಕೂಡ ಡಿಫರೆಂಟ್ ಆಗಿದ್ದು ಕೂತುಹಲ ಸೃಷ್ಠಿಸಲು ಸಹಕಾರಿಯಾಗಿದೆ.

ಬೇರ ಸಿನಿಮಾದ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಸುಮನ್ ತಲ್ವಾರ್ ಬೇರ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಿನಿ ಪ್ರಿಯರಲ್ಲಿ ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

- Advertisement -

Related news

error: Content is protected !!