Monday, June 15, 2026
spot_imgspot_img
spot_imgspot_img

ಮುಂಡಾಜೆ: ರಾತ್ರೋ ರಾತ್ರಿ ನಾಪತ್ತೆಯಾದ ಯುವತಿ..!?

- Advertisement -
- Advertisement -

ಮುಂಡಾಜೆ: ಮನೆಯವರ ಜೊತೆ ಊಟ ಮಾಡಿ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದ ನೆರಿಯ ಗ್ರಾಮದ ಕಾರಕಾಟ್ ಮನೆಯ ಬಿಜು ಜೋಸೆಫ್ ಎಂಬವರ ಪುತ್ರಿ ಅಜಿನಾ ಆಲ್ಪೋನ್ಸಾ(19) ನಾಪತ್ತೆಯಾಗಿದ್ದಾರೆ.

ಮಾ.25 ರಂದು ರಾತ್ರಿ ಅಜಿನಾ ಮಲಗುವ ಕೋಣೆಗೆ ಹೋಗಿದ್ದು, ತಡರಾತ್ರಿ 2 ಗಂಟೆಗೆ ತಂದೆ ಎದ್ದು ರಬ್ಬರ್ ಟ್ಯಾಪಿಂಗಿಗೆ ಅಣಿಯಾಗುತ್ತಿರುವಂತೆ ಚಹಾ ಮಾಡಿಕೊಡಲು ಅಜಿಲಾ ಅವರನ್ನು ಕರೆದಾಗ ಕೋಣೆಯಿಂದ ಪ್ರತಿಕ್ರಿಯೆ ಕೇಳದೇ ಇದ್ದುದರಿಂದ ಒಳಪ್ರವೇಶಿಸಿ ನೋಡಿದಾಗ ಅವರು ಅಲ್ಲಿರಲಿಲ್ಲ. ಬಳಿಕ ಅಕ್ಕ ಪಕ್ಕ ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿ ಸಿಗದೆ ಇದ್ದಾಗ ಧರ್ಮಸ್ಥಳ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಣೆಯಾದ ಯುವತಿ 5 ಅಡಿ ಎತ್ತರದ ಸಾಧಾರಣಾ ಮೈಕಟ್ಟು ಹೊಂದಿದ್ದು, ಗೋದಿ ಬಣ್ಣದವರಾಗಿದ್ದಾರೆ. ಕೊನೆಯದಾಗಿ ಮನೆಯಲ್ಲಿದ್ದಾಗ ಗುಲಾಬಿ ಬಣ್ಣದ ಟಾಪ್ ಮತ್ತು ಜೀನ್ಸ್ ಧರಿಸಿದ್ದರು. ಕನ್ನಡ, ತಮಿಳು, ಮಲಯಾಳಂ ಭಾಷೆ ಬಲ್ಲವರಾಗಿದ್ದಾರೆ.

- Advertisement -

Related news

error: Content is protected !!