- Advertisement -
- Advertisement -





ರಸ್ತೆಯ ಬದಿಯಲ್ಲಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಜಯನಗರ 7ನೇ ಬಡಾವಣೆಯಲ್ಲಿ ನಡೆದಿದೆ.
ಮೃತನ ಗುರುತು ಪತ್ತೆಯಾಗಿಲ್ಲ. ರಾತ್ರಿ ವೇಳೆ ರಸ್ತೆಬದಿಯಲ್ಲಿ ಪಾನಮತ್ತನಾಗಿ ಈತ ಮಲಗಿದ್ದ ಎನ್ನಲಾಗಿದೆ.
ಮತ್ತೊಬ್ಬ ಬಂದು ಆತನ ಮೇಲೆ ಬಿದ್ದಿದ್ದಾನೆ. ಇದೇ ವಿಚಾರವಾಗಿ ಇಬ್ಬರು ಮಧ್ಯೆ ಗಲಾಟೆಯಾಗಿದೆ. ಮಲಗಿದ್ದ ವ್ಯಕ್ತಿಯನ್ನು ದರದರನೆ ಎಳೆದು ತಂದ ಆಸಾಮಿ ನಂತರ ರಸ್ತೆ ಪಕ್ಕ ಬಿದ್ದಿದ್ದ ಕಲ್ಲು ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ತೀವ್ರ ರಕ್ತಸ್ರಾವವಾಗಿ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಇಂದು ಬೆಳಗ್ಗೆ ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಬನಶಂಕರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ರಸ್ತೆಯಲ್ಲಿರುವ ಸಿಸಿ ಟಿವಿ ಫೂಟೇಜ್‌ಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಯ ಬಂಧನಕ್ಕೆ ಬಲೆಬೀಸಲಾಗಿದೆ.
- Advertisement -