Saturday, June 13, 2026
spot_imgspot_img
spot_imgspot_img

ಮಂಗಳೂರು: ಮೀನುಗಾರರ ಬಲೆಗೆ ಬಿದ್ದ 300 ಕೆ.ಜಿ. ತೂಕದ ಬೃಹತ್ ಮುರು ಮೀನು

- Advertisement -
- Advertisement -

ಮಂಗಳೂರು: ಮೀನುಗಾರಿಕಾ ಧಕ್ಕೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ಹೋಗಿದ್ದ ಮಂಗಳೂರಿನ ಮೀನುಗಾರರ ಬಲೆಗೆ ಬೃಹತ್ ಗಾತ್ರದ ಮುರು ಮೀನು ಸಿಕ್ಕಿದ್ದು, ಇದೀಗ ಇದರ ವೀಡಿಯೋ ಭಾರೀ ವೈರಲ್ ಆಗುತ್ತಿದೆ. ಬರೋಬ್ಬರಿ 300 ಕೆ.ಜಿ.ಯಷ್ಟು ತೂಕವಿರುವ ಈ ಮುರು ಮೀನನ್ನು ಐದಾರು ಮಂದಿ ಮೀನುಗಾರರು ಎತ್ತಲು ಹರಸಾಹಸ ಪಡುವುದು ದೃಶ್ಯದಲ್ಲಿ ಕಂಡುಬಂದಿದೆ.

ಸಾಮಾನ್ಯ ಸಣ್ಣ ಗಾತ್ರದ ಮುರು ಮೀನು ಎಲ್ಲೆಡೆ ನೋಡಲು ಸಿಗುತ್ತಿದೆ ಆದರೆ ಇಷ್ಟೊಂದು ದೊಡ್ಡ ಗಾತ್ರದ ಮುರು ಮೀನು ಇದೇ ಮೊದಲ ಬಾರಿ ಮೀನುಗಾರರ ಬಲೆಗೆ ಬಿದ್ದಿದ್ದು, ಕೆ.ಜಿ.ಗೆ 200 ರೂಪಾಯಿಯಂತೆ ಮಾರಾಟವಾಗಿದೆ ಎಂದು ಮೀನುಗಾರರೊಬ್ಬರು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!