Sunday, June 29, 2025
spot_imgspot_img
spot_imgspot_img

ಉಳ್ಳಾಲ: ಮತ್ತೆ ಆತಂಕ ಸೃಷ್ಟಿಸಿದ ಚೀನಾ ಹಡಗು; 220 ಮೆಟ್ರಿಕ್‌ ಟನ್ ತೈಲ ಸೋರಿಕೆಯ ಭೀತಿ – ಮೀನುಗಾರಿಕೆ ನಿಷೇಧ

- Advertisement -
- Advertisement -

ಉಳ್ಳಾಲ: ಬಟ್ಟಪ್ಪಾಡಿ ಹತ್ತಿರದ ಸಮುದ್ರದಲ್ಲಿ ಪ್ರಿನ್ಸೆಸ್ ಮಿರಾಲ್ ಎಂಬ ಹಡಗು ಮುಳುಗಡೆಯಾಗಿದ್ದು ಮತ್ತೆ ಆತಂಕ ಸೃಷ್ಟಿಯಾಗಿದೆ. ಚೀನಾದಿಂದ ಲೆಬನಾನ್‌ಗೆ ಸಾಗಿಸುತ್ತಿದ್ದ ಸರಕು ಸಾಗಾಟದ ಹಡಗು ಮುಳುಗಡೆಯಾಗಿದ್ದು, ಹಡಗಿನ ಡರ್ಟಿ ವಾಟರ್ ಟ್ಯಾಂಕಿನಿಂದ ಸಣ್ಣ ಪ್ರಮಾಣದಲ್ಲಿ ತೈಲ ಸೋರಿಕೆಯಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ವಲಯದ ಸುತ್ತಮುತ್ತಲಿನ ಸಮುದ್ರದಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ.

220 ಮೆಟ್ರಿಕ್‌ ಟನ್ ತೈಲ ಸೋರಿಕೆಯ ಭೀತಿ..!
ಚೀನಾದಿಂದ ಲೆಬನಾನ್‌ಗೆ ಸರಕು ಸಾಗಿಸುತ್ತಿದ್ದ ಹಡಗು ಮಂಗಳೂರು ಕಡಲ ತೀರ ಪ್ರವೇಶಿಸಿದೆ. ಬರೋಬ್ಬರಿ ೮೦೦೦ ಸ್ಟೀಲ್ ಕಾಯಿಲ್ ಸಗಾಟ ಮಾಡಲಾಗುತ್ತಿತ್ತು. ತಾಂತ್ರಿಕ ಕಾರಣದಿಂದ ಮುಳುಗಡೆಯಾಗಿದೆ. ಕೇಂದ್ರದ ತನಿಖಾ ದಳದಿಂದ ತನಿಖೆ ಹಾಗೂ ಕೋಸ್ಟ್‌ಗಾರ್ಡ್‌ ಸಿಬ್ಬಂದಿಗಳು ೧೫ ಮಂದಿಯನ್ನು ರಕ್ಷಣೆ ಮಾಡಿದ್ದರು. ಈ ಹಡಗಿನಲ್ಲಿ ೨೨೦ ಮೆಟ್ರಿಕ್ ಟನ್‌ ತೈಲವಿದ್ದು ಸೋರಿಕೆಯ ಭೀತಿ ಎದುರಾಗಿದೆ. ಅಂತೆಯೇ ಕರಾವಳಿ ತೀರದಲ್ಲಿ ಹೈ ಅಲರ್ಟ್‌ ವಹಿಸಲಾಗಿದೆ. ಒಂದು ವೇಳೆ ಹಡಗಿನಲ್ಲಿದ್ದ ೨೨೦ ಮೆಟ್ರಿಕ್ ಟನ್‌ ತೈಲ ಸೋರಿತೆಯಾದರೆ ಮತ್ಸ್ಯ ಸಂಕುಲ ನಾಶವಾಗುವ ಎಲ್ಲಾ ಲಕ್ಷಣಗಳಿದೆ.

ಇನ್ನು ಸಾಗರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದು ಇದನ್ನು ಉಲ್ಲಂಘಿಸಿದ್ದಲ್ಲೀ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ಬಟ್ಟಪ್ಪಾಡಿಯಲ್ಲಿ ವಿದೇಶಿ ಸರಕು ಸಾಗಾಟದ ಹಡಗು ತಾಂತ್ರಿಕ ಸಮಸ್ಯೆಯಿಂದಾಗಿ ಸಂಚಾರ ಸ್ಥಗಿತಗೊಳಿಸಿತ್ತು. ಅಲ್ಲದೆ, ಸಣ್ಣ ರಂದ್ರದ ಮೂಲಕ ಹಡಗಿನೊಳಗೆ ನೀರು ಪ್ರವೇಶಿಸಿತ್ತು. ತಕ್ಷಣ ಕೋರ್ಸ್ಟ್ ಗಾರ್ಡ್ ಸಿಬ್ಬಂದಿಗಳಿಗೆ ಈಮೇಲ್ ಮೂಲಕ ಮಾಹಿತಿ ರವಾನಿಸಲಾಗಿದ್ದು, ಹಡಗಿನಲ್ಲಿದ್ದವರನ್ನು ರಕ್ಷಿಸಲಾಗಿತ್ತು.

- Advertisement -

Related news

error: Content is protected !!