Friday, May 3, 2024
spot_imgspot_img
spot_imgspot_img

ಕೇಪು : ಮೈರ ,ಕೇಪು ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ- ಸುಧಾಕರ್ ಪೂಜಾರಿ ಬಡೆಕೋಡಿ ತಂಡ ಚಾಂಪಿಯನ್

- Advertisement -G L Acharya panikkar
- Advertisement -

ಮೈರ ರಷೀದ್ ದುಬೈ ತಂಡ ರನ್ನರ್ ಅಪ್ ಪ್ರಶಸ್ತಿ

ಕೇಪು : ಶ್ರೀ ದುರ್ಗಾಮಿತ್ರವೃಂದ(ರಿ) ಮೈರ ಕೇಪು ಆಯೋಜಿಸಿದ , ಮೊತ್ತ ಮೊದಲ ಬಾರಿ ಏಳು ಜನರ ಸೂಪರ್ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟವು 07-01-2024 ರವಿವಾರ ಮಿತ್ರವೃಂದದ ಮೈದಾನ ದಲ್ಲಿ ನಡೆಯಿತು.ಪಂದ್ಯದ ಉದ್ಘಾಟನೆಯು ವೃಂದದ ಅಧ್ಯಕ್ಷರು ನೆರವೇರಿಸಿದರು . ಈ ಸಮಯದಲ್ಲಿ ವೃಂದದ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ನೆರವೇರಿತು.

ಸೀಸನ್ 1 ರ ಕ್ರಿಕೆಟ್ ಲೀಗ್‌ ಮಾದರಿಯ ಪಂದ್ಯಾವಳಿಯಲ್ಲಿ ಒಟ್ಟು 5 ತಂಡಗಳಾದ , ದುಬೈನ ಮೈರ ರಷೀದ್ , ಸುಧಾಕರ್ ಪೂಜಾರಿ ಬಡೆಕೋಡಿ , ನೀರಂಜನ್ ಕಲ್ಲಪಾಪು , ರಾಜೇಶ್ ಕರವೀರ ,‌ ಕಿರಣ್ ಕುಕ್ಕೆಬೆಟ್ಟು , ತಂಡಗಳು ಭಾಗವಹಿಸಿದ್ದವು. ಲೀಗ್ ಪಂದ್ಯದಲ್ಲಿ ” ಜಯಶಾಲಿಯಾಗಿ‌ ಸುಧಾಕರ್ ಪೂಜಾರಿ ಬಡಕೋಡಿ‌ಯವರ ತಂಡ ” ಟ್ರೋಫಿ ತನ್ನದಾಗಿಸಿಕೊಂಡಿತು. ದುಬೈನ ರಷೀದ್ ಮೈರ ರವರ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.


ಪಂದ್ಯಾಟದ ಸರಣೆ ಶ್ರೇಷ್ಠ ನಾಗಿ ಪುನೀತ್ ಮೈರ, ಶೈಲೇಶ್ ಅಮೈ ಶ್ರೇಷ್ಠ ದಾಂಡಿಗನಾಗಿ , ಬೆಸ್ಟ್ ಎಸೆತಗಾರನಾಗಿ ಸುಧಾಕರ್ ಪೂಜಾರಿ ಬಡಕೋಡಿ ಟ್ರೋಫಿ ಪಡೆದುಕೊಂಡರು.

ಪಂದ್ಯಾಟದ ಕಾರ್ಯಕ್ರಮವು , ದುಬೈನ ರಷೀದ್ ಮೈರ ರವರ ಸೃಜನಾತ್ಮಕ ಚಿಂತನೆಯಲ್ಲಿ ಹಾಗೂ ಶ್ರೀ ದುರ್ಗಾಮಿತ್ರವೃಂದದ ಸರ್ವ ಸದಸ್ಯರ ಸಹಕಾರದಲ್ಲಿ ಸೀಸನ್ 1ರ ಲೀಗ್ ಪಂದ್ಯಾಟ ಯಶಸ್ವಿಯಾಗಿ ನೆರವೇರಿತು. ಮಧ್ಯಾಹ್ನದ ಊಟ , ಬೆಳಗ್ಗೆ ಹಾಗೂ ಸಂಜೆಯ ಚಹಾ ದ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಪಂದ್ಯಾಟದ ವಿಶೇಷವೇನಂದರೆ , ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ಸರ್ವ ಸದಸ್ಯರು ಭಾಗವಹಿಸಿದ್ದೆ ಲೀಗ್ ಪಂದ್ಯ ಯಶಸ್ವಿಗೆ ಕಾರಣವಾಯಿತು.

- Advertisement -

Related news

error: Content is protected !!