Tuesday, June 30, 2026
spot_imgspot_img
spot_imgspot_img

ಮೈಸೂರು ಗ್ಯಾಂಗ್‌ ರೇಪ್‌ ಪ್ರಕರಣ; 85 ಗಂಟೆಗಳಲ್ಲಿ ಕಾಮುಕರು ಪೊಲೀಸ್ ಬಲೆಗೆ

- Advertisement -
- Advertisement -

ಮೈಸೂರು: ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮೂಹಿಕ ಅತ್ಯಾಚಾರದಲ್ಲಿ ಒಟ್ಟು ಆರು ಜನರು ಆರೋಪಿಗಳಾಗಿದ್ದು, ಅವರಲ್ಲಿ 5 ಜನರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದು, ಆರೋಪಿಗಳು ತಮಿಳುನಾಡು ಮೂಲದವರು ಎಂದು ಹೇಳಲಾಗುತ್ತಿದೆ.

ವಿದ್ಯಾರ್ಥಿನಿ ಇತ್ತೀಚೆಗೆ ಅದೇ ಸಮಯದಲ್ಲಿ ಅತ್ಯಾಚಾರ ನಡೆದ ಸ್ಥಳಕ್ಕೆ ಬರುತ್ತಿದ್ದುದನ್ನು ಗಮನಿಸಿದ್ದ ಕಾಮುಕರು, ಹೊಂಚು ಹಾಕಿಯೇ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎನ್ನಲಾಗುತ್ತಿದೆ. ಪ್ರಕರಣದ ಕುರಿತು ತನಿಖೆ ಶುರುವಾಗುತ್ತಿದ್ದಂತೆ ಆರೋಪಿಗಳು ಮೈಸೂರಿನಿಂದ ಪರಾರಿಯಾಗಿದ್ದರು.

ಇನ್ನು ಈ ಕುರಿತ ವಿವರವಾದ ಮಾಹಿತಿಯನ್ನು ಪೊಲೀಸರು ಸಂಜೆ ಸುದ್ದಿಗೋಷ್ಠಿ ಕರೆದು ನೀಡುವ ಸಾಧ್ಯತೆಗಳಿವೆ.

- Advertisement -

Related news

error: Content is protected !!