- Advertisement -
- Advertisement -


ಮೈಸೂರು: ತಿ. ನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸುನೀಲ್ ಕುಮಾರ್ ವಿರುದ್ದ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಆರೋಪಿ ಸುನೀಲ್ ಕುಮಾರ್ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಎನ್ನಲಾಗಿದ್ದು, ವಿದ್ಯಾರ್ಥಿನಿಯರೇ ಕಷ್ಟ ಹೇಳಿಕೊಂಡಿರುವ ಆಡಿಯೋ ವೈರಲ್ ಆಗಿದೆ.
ಈತನ ವರ್ತನೆ ವಿರುದ್ದ ವಿದ್ಯಾರ್ಥಿನಿಯರು ಬೇಸತ್ತು ಹೋಗಿದ್ದಾರೆ. ಇದಲ್ಲದೇ ಈತನ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ದೂರು ನೀಡಿದ್ದರು ಕೂಡ ಇಲ್ಲಿ ತನಕ ಯಾವುದೇ ಕ್ರಮವನ್ನು ಕೈಗೊಳ್ಳದೇ ಇಲಾಖೆ ಕಾಲಹರಣ ಮಾಡುತ್ತಿದ್ದು, ಈತನ ಲೀಲೆಗೆ ಸಾಥ್ ನೀಡುತ್ತಿದೆ. ಕೂಡಲೇ ಈತನ ವಿರುದ್ದ ಕೇಳಿ ಬರುತ್ತಿರುವ ಆರೋಪವನ್ನು ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳು ಆಗ್ರಹ ಮಾಡಿದೆ.


- Advertisement -