Friday, September 18, 2026
spot_imgspot_img
spot_imgspot_img

ಟಾಟಾ ಗ್ರೂಪ್‌ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್‌ ಮರುನೇಮಕ

- Advertisement -
- Advertisement -

ಮುಂಬೈ: ಟಾಟಾ ಸನ್ಸ್‌ನ ನಿರ್ದೇಶಕರ ಮಂಡಳಿಯು ಎನ್. ಚಂದ್ರಶೇಖರನ್ ಅವರನ್ನ ಟಾಟಾ ಸಮೂಹದ ಅಧ್ಯಕ್ಷರಾಗಿ ಮತ್ತೊಂದು 5 ವರ್ಷಗಳ ಅವಧಿಗೆ ಮರುನೇಮಕ ಮಾಡಲು ಅನುಮೋದನೆ ನೀಡಿರುವುದಾಗಿ ವರದಿಯಾಗಿದೆ. ಗುರುವಾರ ಮುಂಬೈನಲ್ಲಿ ನಡೆದ ಟಾಟಾ ಸನ್ಸ್‌ನ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಚಂದ್ರಶೇಖರನ್ ಅವರು ಟಾಟಾ ಸನ್ಸ್‌ನ ಮುಖ್ಯಸ್ಥರಾಗಿದ್ದು, ಹಿಡುವಳಿ ಕಂಪನಿ ಮತ್ತು 100 ಕ್ಕೂ ಹೆಚ್ಚು ಟಾಟಾ ಆಪರೇಟಿಂಗ್ ಕಂಪನಿಗಳ ಪ್ರವರ್ತಕರಾಗಿದ್ದಾರೆ. ಅವರು ಅಕ್ಟೋಬರ್ 2016 ರಲ್ಲಿ ಟಾಟಾ ಸನ್ಸ್ ಮಂಡಳಿಗೆ ಸೇರಿದರು. ಜನವರಿ 2017 ರಲ್ಲಿ ಮುಖ್ಯಸ್ಥರಾಗಿ ನೇಮಕಗೊಂಡರು. ಆಗಿನಿಂದಲೂ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಅವರ ಅಧಿಕಾರವಧಿ ಇನ್ನೂ 5 ವರ್ಷ ವಿಸ್ತರಣೆಯಾಗಿದೆ.

ಚಂದ್ರಶೇಖರನ್ ಅವರು ಆಗಸ್ಟ್ 12 ರಂದು, ತಮ್ಮ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ಮೂರನೇ ಅವಧಿಗೆ ಮುಂದುವರಿಯುವುದಿಲ್ಲ ಎಂದು ಘೋಷಿಸಿದ್ದರು. ಆದರೀಗ ನಿರ್ದೇಶಕರ ಮಂಡಳಿ ಅವರನ್ನು ಮುಂದಿನ 5 ವರ್ಷ ಅವಧಿಗೆ ಮರುನೇಮಕ ಮಾಡಿಕೊಂಡಿದ್ದಲ್ಲದೇ, ಜವಾಬ್ದಾರಿಯಿಂದ ಹಿಂದೆ ಸರಿಯುವ ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

- Advertisement -

Related news

error: Content is protected !!