Thursday, May 16, 2024
spot_imgspot_img
spot_imgspot_img

ಹುಡುಗಿಯರ ಉಗುರಿನ ಅಂದ ಹೆಚ್ಚಿಸುವ ನೇಲ್ ಪಾಲಿಶ್

- Advertisement -G L Acharya panikkar
- Advertisement -

ಹುಡುಗಿಯರು ತಮ್ಮ ಬ್ಯೂಟಿ ಪ್ರಾಡೆಕ್ಟ್ ಬಗ್ಗೆ ಹೆಚ್ಚು ಚಿಂತಿತರಾಗಿರುತ್ತಾರೆ. ಯಾವುದೇ ಸಮಾರಂಭಕ್ಕೆ ಹೋಗುವ ಮೊದಲು ಎಲ್ಲ ಮೇಕಪ್ ಉತ್ಪನ್ನಗಳನ್ನು ಖರೀದಿ ಮಾಡ್ತಾರೆ. ಸಮಾರಂಭದ ದಿನ ಯಾವುದೇ ಸಮಸ್ಯೆಯಾಗದಿರಲಿ ಎನ್ನುವ ಕಾರಣಕ್ಕೆ ಈ ಎಲ್ಲ ತಯಾರಿ ಮಾಡಿಕೊಳ್ತಾರೆ.

ಆದರೂ ಸರಿಯಾದ ಸಮಯಕ್ಕೆ ಮೇಕಪ್ ಕಿಟ್ ಕೈ ಕೊಡುತ್ತದೆ. ನೇಲ್ ಪಾಲಿಶ್ ಕೈ ಕೊಡೋದು ಹೆಚ್ಚು.

ಆತುರಾತುರದಲ್ಲಿ ನೇಲ್ ಪಾಲಿಶ್ ಹಚ್ಚಿಕೊಳ್ಳುತ್ತಿದ್ದರೆ ಉಗುರಿನ ಅತ್ತ-ಇತ್ತ ನೇಲ್ ಪಾಲಿಶ್ ತಾಗುತ್ತದೆ. ಇದನ್ನು ತಪ್ಪಿಸಬೇಕು ಎಂದರೆ ಉಗುರಿನ ಪಕ್ಕದಲ್ಲಿರುವ ಚರ್ಮಕ್ಕೆ ವ್ಯಾಸಲಿನ್ ಹಚ್ಚಿ. ನಂತರ ನೇಲ್ ಪಾಲಿಶ್ ಹಚ್ಚಿ. ಆಗ ಚರ್ಮಕ್ಕೆ ನೇಲ್ ಪಾಲಿಶ್ ಅಂಟುವುದಿಲ್ಲ.

ಕೆಲವೊಮ್ಮೆ ನೇಲ್ ಪಾಲಿಶ್ ಬಾಟಲಿ ಮುಚ್ಚಳ ತೆಗೆಯೋಕೆ ಬರೋದಿಲ್ಲ. ಮುಚ್ಚಳ ಗಟ್ಟಿಯಾಗ್ಬಿಟ್ಟಿರುತ್ತದೆ. ಇಂಥ ಸಂದರ್ಭದಲ್ಲಿ ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ. ನೇಲ್ಪಾಲಿಶ್ ಬಾಟಲಿಯನ್ನು ನೀರಿನಲ್ಲಿಟ್ಟು ಸ್ವಲ್ಪ ಸಮಯದ ನಂತರ ತೆಗೆಯಿರಿ.

ಸಮಾರಂಭಕ್ಕೆ ಹೋಗುವ ಮೊದಲೇ ನೇಲ್ ಪಾಲಿಶ್ ಖರೀದಿ ಮಾಡ್ತಿರಾ. ಆದರೆ ನೇಲ್ ಪಾಲಿಶ್ ಗಟ್ಟಿಯಾಗಿ ಸಮಸ್ಯೆ ತಂದೊಡ್ಡುತ್ತದೆ. ಈ ತೊಂದರೆ ಆಗಬಾರದು ಅಂದ್ರೆ ನೇಲ್ ಪಾಲಿಶ್ ಬಾಟಲಿ ಮೇಲೆ ವ್ಯಾಸಲಿನ್ ಹಚ್ಚಿಡಿ. ಆಗ ನೇಲ್ ಪಾಲಿಶ್ ಗಟ್ಟಿಯಾಗುವುದಿಲ್ಲ

- Advertisement -

Related news

error: Content is protected !!