Wednesday, July 2, 2025
spot_imgspot_img
spot_imgspot_img

ಕಾಂಗ್ರೆಸ್ ಮುಕ್ತ ರಾಜ್ಯ ನಮ್ಮ ಪ್ರಾಥಮಿಕ ಗುರಿ -ಸಂಸದ ನಳಿನ್ ಕುಮಾರ್

- Advertisement -
- Advertisement -

ಅಂಬಾಗಿಲು: ಗ್ರಾಮ ಸ್ವರಾಜ್ಯ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದರಾದ ನಳಿನ್ ಕುಮಾರ್, ರಾಜ್ಯವನ್ನು ಕಾಂಗ್ರೆಸ್ ಮುಕ್ತವನ್ನಾಗಿಸುವುದು ನಮ್ಮ ಪ್ರಾಥಮಿಕ ಗುರಿಯೆಂದು ಹೇಳಿದ್ದಾರೆ.

ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 80% ದಷ್ಟು ಸ್ಥಾನ ಗೆಲ್ಲುವುದು ನಮ್ಮ ಗುರಿ. ಪಂಚಾಯತ್ ನಲ್ಲಿ ಗೆದ್ದು ಸಾಮಾನ್ಯ ಕಾರ್ಯಕರ್ತ ಕೂಡ ನಾಯಕನಾಗಿ ಬದಲಾಗಬಹುದೆಂದು ನಳಿನ್ ಅಭಿಪ್ರಾಯ ಹಂಚಿಕೊಂಡರು.

ಪಂಚಾಯತ್ ಚುನಾವಣೆಗೆ ನಮ್ಮ ತಯಾರಿ ಶುರುವಾಗಿದೆ. ಬಿಜೆಪಿ ಪಂಚ ತಂತ್ರ ಮತ್ತು ಸೂತ್ರಗಳನ್ನು ಸಿದ್ಧಪಡಿಸಿಕೊಂಡಿದೆ ಎಂದು ಹೇಳಿದರು.

ಮೋದಿಯವರು ಗ್ರಾಮಗಳ ಅಭಿವೃದ್ಧಿಗಾಗಿ ಮನ್’ರೇಗಾ ಯೋಜನೆಯಡಿಯಲ್ಲಿ ನೇರವಾಗಿ ಪಂಚಾಯತ್ ಖಾತೆಗೆ ಹಣ ವರ್ಗಾಯಿಸುತ್ತಾರೆ. ಪಂಚಾಯತ್ ಅಧ್ಯಕ್ಷ ಕೂಡ ಪ್ರಧಾನಿಯಿದ್ದಂತೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಅಧಿಕಾರ ನೀಡುವುದರ ಬಗ್ಗೆ ಪ್ರಸ್ತಾಪಿಸಿದರು.

- Advertisement -

Related news

error: Content is protected !!