- Advertisement -
- Advertisement -
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ ನಳಿನಿ ಶ್ರೀಹರನ್ ವೆಲ್ಲೂರು ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಳಿನಿ, ಕಳೆದ 29 ವರ್ಷಗಳಿಂದ ಜೈಲಿನಲ್ಲಿದ್ದಾರೆ. ನಳಿನಿ ಪರ ವಕೀಲೆ ಪುಗಳೇಂದಿ ಹೇಳುವ ಪ್ರಕಾರ, ನಳಿನಿ ಹಾಗೂ ಮತ್ತೋರ್ವ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಗೆ ಜೈಲಿನಲ್ಲಿ ಗಲಾಟೆಯಾಗಿತ್ತು. ಈ ವಿಚಾರವನ್ನು ಕೈದಿ ಜೈಲರ್ ಗಮನಕ್ಕೆ ತಂದ ಹಿನ್ನಲೆಯಲ್ಲಿ ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ನಳಿನಿ ಇದೇ ಮೊದಲ ಬಾರಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೀಗಾಗಿ ಈ ಬಗ್ಗೆ ಸ್ಪಷ್ಟ ಕಾರಣ ತಿಳಿಯಬೇಕಿದೆ. ಇದಲ್ಲದೇ, ನಳಿನಿ ಪತಿ ಮುರುಗನ್ ಕೂಡ ಇದೇ ಜೈಲಿನಲ್ಲಿದ್ದಾನೆ.
- Advertisement -