Saturday, June 27, 2026
spot_imgspot_img
spot_imgspot_img

ನಾಪೋಕ್ಲುವಿನಲ್ಲಿ ಗಾಂಜಾ ಮಾರಾಟ, ಆರೋಪಿಯ ಬಂಧನ; 1 ಲಕ್ಷ ಮೌಲ್ಯದ ಗಾಂಜಾ ಹಾಗೂ ಕಾರು ವಶಕ್ಕೆ

- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗಾಂಜಾ ದಂಧೆಕೋರರ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ನಾಪೋಕ್ಲು ಪಟ್ಟಣದ ಹಳೇ ತಾಲ್ಲೂಕಿನ ಶಾಲಾ ಮೈದಾನ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ.

ಕುಂಜಿಲ ಗ್ರಾಮದ ಕೆ.ಯು.ಅಶ್ರಫ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, 1 ಲಕ್ಷ ರೂ. ಮೌಲ್ಯದ 1 ಕೆ.ಜಿ 100 ಗ್ರಾಂ. ಗಾಂಜಾ ಮತ್ತು ಮಾರಾಟಕ್ಕೆ ಉಪಯೋಗಿಸಿದ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರ ನಿರ್ದೇಶನದಂತೆ ಡಿವೈಎಸ್‌ಪಿ ಬಿ.ಪಿ.ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರ ನೇತೃತ್ವದಲ್ಲಿ ನಾಪೋಕ್ಲು ಪೊಲೀಸ್ ಠಾಣಾ ಉಪ ನಿರೀಕ್ಷಕ ಕಿರಣ್.ಆರ್, ಸಿಬ್ಬಂದಿಗಳಾದ ಕುಶಾಲಪ್ಪ ಎ.ಎಸ್.ಐ. ಜ್ಯೋತಿ ಕುಮಾರ್ ಹೆಚ್.ಸಿ, ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಸಾಜನ್ ಹೆಚ್.ಸಿ, ನವೀನ್, ಮಹೇಶ್, ಹರ್ಷ.ಮಹದೇವ ನಾಯಕ್, ರಾಜೇಶ್, ಗಿರೀಶ್, ಶಿವ ಪ್ರಸಾದ್, ಶರತ್, ಸಮೀಲ್, ಚಾಲಕ ಶರೀಫ್ ಅವರುಗಳು ಕಾರ್ಯಾಚರಣೆ ನಡೆಸಿದರು.

ಪೊಲೀಸರ ಕಾರ್ಯಾಚರಣೆ ಬಗ್ಗೆ ಎಸ್‌ಪಿ ಕ್ಷಮಾಮಿಶ್ರ ಶ್ಲಾಘಿಸಿದ್ದಾರೆ.

- Advertisement -

Related news

error: Content is protected !!