Tuesday, April 16, 2024
spot_imgspot_img
spot_imgspot_img

ಪಾರದರ್ಶಕ ತೆರಿಗೆ-ಪ್ರಾಮಾಣಿಕರಿಗೆ ಗೌರವ ಪ್ಲಾಟ್ ಫಾರ್ಮ್ ಗೆ ಪ್ರಧಾನಿ ಮೋದಿ ಚಾಲನೆ

- Advertisement -G L Acharya panikkar
- Advertisement -

ನವದೆಹಲಿ: ಪಾರದರ್ಶಕ ತೆರಿಗೆ-ಪ್ರಾಮಾಣಿಕರಿಗೆ ಗೌರವ ಪ್ಲಾಟ್ ಫಾರ್ಮ್ ಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆ ಅನುಸರಣೆಯ ಪಾತ್ರವನ್ನು ಬಹುಮುಖ್ಯ. ಸರ್ಕಾರ ನೀತಿ ಆಧಾರಿತ ಆಡಳಿತ ಮಾದರಿಯನ್ನು ಅನುಸರಿಸುತ್ತಿದೆ ಎಂದು ಹೇಳಿದರು.

ಇದು ಹೊಸ ಆಡಳಿತ ಮಾದರಿಯ ಬಳಕೆಯಾಗಿದೆ ಮತ್ತು ದೇಶವು ಅದರ ಫಲಿತಾಂಶಗಳನ್ನು ಪಡೆಯುತ್ತಿದೆ. ಪಾರದರ್ಶಕ ತೆರಿಗೆ-ಪ್ರಾಮಾಣಿಕರನ್ನು ಗೌರವಿಸುವುದು ನಮ್ಮ ಉದ್ದೇಶ ಎಂದರು.

ಫೇಸ್ ಲೆಸ್ ತೆರಿಗೆ ವ್ಯವಸ್ಥೆ:

ಹೊಸ ತೆರಿಗೆ ವ್ಯವಸ್ಥೆಯು ಫೇಸ್ ಲೆಸ್ ಆಗಿರಲಿದೆ. ಇದು ತೆರಿಗೆದಾರರಿಗೆ ನ್ಯಾಯ ಮತ್ತು ನಿರ್ಭಯತೆಯ ನಂಬಿಕೆಯನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದರು.”ದೇಶದಲ್ಲಿ ರಚನಾತ್ಮಕ ಸುಧಾರಣೆಗಳ ಪ್ರವೃತ್ತಿ ಇಂದು ಹೊಸ ಹಂತವನ್ನು ತಲುಪಿದೆ. ಪಾರದರ್ಶಕ ತೆರಿಗೆ – ಪ್ರಾಮಾಣಿಕರನ್ನು ಗೌರವಿಸುವುದು, 21 ನೇ ಶತಮಾನದ ಹೊಸ ತೆರಿಗೆ ವ್ಯವಸ್ಥೆ.ಇದನ್ನು ಇಂದು ಪ್ರಾರಂಭಿಸಲಾಗಿದೆ” ಎಂದು ಹೇಳಿದರು.

ವೇದಿಕೆಯು ಫೇಸ್ ಲೆಸ್ ಮೌಲ್ಯಮಾಪನ, ಫೇಸ್ ಲೆಸ್ ಮನವಿ ಮತ್ತು ತೆರಿಗೆದಾರರ ಚಾರ್ಟರ್ ನಂತಹ ಪ್ರಮುಖ ಸುಧಾರಣೆಗಳನ್ನು ಹೊಂದಿದೆ. ಫೇಸ್ ಲೆಸ್ ಮೌಲ್ಯಮಾಪನ ಮತ್ತು ತೆರಿಗೆದಾರರ ಚಾರ್ಟರ್ ಇಂದಿನಿಂದ ಜಾರಿಗೆ ಬಂದಿದೆ. ಸೆಪ್ಟೆಂಬರ್ 25 ರಿಂದ ಪಂಡಿತ್ ದೀನ್ ದಯಾಳ್ ಅವರ ಜನ್ಮ ದಿನಾಚರಣೆಯಂದು ಫೇಸ್ ಲೆಸ್ ಅಪೀಲ್ ಸೌಲಭ್ಯ ನಾಗರಿಕರಿಗೆ ಲಭ್ಯವಿರುತ್ತದೆ ಎಂದು ತಿಳಿಸಿದರು.

ಈಗ ತೆರಿಗೆ ವ್ಯವಸ್ಥೆಯು ಫೇಸ್ ಲೆಸ್ ಆಗಿರಲಿದೆ. ಆದರೆ ಇದು ತೆರಿಗೆದಾರರಿಗೆ ನ್ಯಾಯ ಮತ್ತು ನಿರ್ಭಯತೆಗೆ ನಂಬಿಕೆ ನೀಡುತ್ತದೆ. ಕಳೆದ 6 ವರ್ಷಗಳಲ್ಲಿ, ನಮ್ಮ ಗಮನವು ಬ್ಯಾಂಕಿಂಗ್ ಮಾಡುವುದು, ಅಸುರಕ್ಷಿತರನ್ನು ಭದ್ರಪಡಿಸುವುದು ಎಂದು ಮೋದಿ ಹೇಳಿದರು.
ಪ್ರಾಮಾಣಿಕರನ್ನು ಗೌರವಿಸುವ ಹೊಸ ಪ್ರಯಾಣವು ಇಂದು ಪ್ರಾರಂಭವಾಗಿದೆ. ದೇಶದ ಪ್ರಾಮಾಣಿಕ ತೆರಿಗೆದಾರರು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಇಂದಿನಿಂದ ಪ್ರಾರಂಭವಾಗುವ ಹೊಸ ಸೌಲಭ್ಯಗಳು ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತಕ್ಕೆ ನಮ್ಮ ಬದ್ಧತೆಯನ್ನು ಸ್ಥಾಪಿಸುತ್ತದೆ” ಎಂದು ಅವರು ಹೇಳಿದರು.

ಈ ಉಪಕ್ರಮ ತೆರಿಗೆ ಆಡಳಿತದ ಇತಿಹಾಸದಲ್ಲಿ ಒಂದು ಹೆಗ್ಗುರುತು: ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಾತನಾಡಿ, ಈ ಉಪಕ್ರಮವು ತೆರಿಗೆ ಆಡಳಿತದ ಇತಿಹಾಸದಲ್ಲಿ ಒಂದು ಹೆಗ್ಗುರುತಾಗಿದೆ.ತೆರಿಗೆದಾರರನ್ನು ಸಶಕ್ತಗೊಳಿಸುವುದು, ಪಾರದರ್ಶಕ ವ್ಯವಸ್ಥೆಯನ್ನು ಒದಗಿಸುವುದು ಮತ್ತು ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸುವುದು ಪ್ರಧಾನಮಂತ್ರಿಯ ದೃಷ್ಟಿಕೋನವಾಗಿದೆ. ಈ ದೃಷ್ಟಿಯನ್ನು ಸಾಕಾರಗೊಳಿಸಲು ಸಿಬಿಡಿಟಿ ಒಂದು ಚೌಕಟ್ಟನ್ನು ನೀಡಿದೆ ಮತ್ತು ಈ ವೇದಿಕೆಯ ರೂಪದಲ್ಲಿ ಒಂದು ವ್ಯವಸ್ಥೆಯನ್ನು ಹಾಕಿದೆ ಎಂದು ಅವರು ಹೇಳಿದರು.

- Advertisement -

Related news

error: Content is protected !!