- Advertisement -
- Advertisement -



ಹೊಸದಿಲ್ಲಿ: ಬಾಹ್ಯಾಕಾಶ ಯಾನಿಗಳ ತಂಡದ ನಾಯಕ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ತಾಂತ್ರಿಕ ಸಿಬ್ಬಂದಿ ತಮ್ಮ ಭೂಮಿಗೆ ಮರಳುವ ಪಯಣವನ್ನು ಜುಲೈ 14ರಂದು ಆರಂಭಿಸಲಿದ್ದಾರೆ ಎಂದು ನಾಸಾ ಪ್ರಕಟಿಸಿದೆ.
“ಸ್ಟೇಷನ್ ಪ್ರೋಗ್ರಾಂ ಬಗ್ಗೆ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಆ್ಯಕ್ಸಿಯಮ್-4 ಪ್ರಗತಿಯನ್ನು ಜಾಗರೂಕವಾಗಿ ವೀಕ್ಷಿಸುತ್ತಿದ್ದೇವೆ. ಈ ಮಿಷನ್ ಸಮಾಪನಗೊಳಿಸುವುದು ಅಗತ್ಯ ಎನ್ನುವುದು ನಮ್ಮ ಭಾವನೆ; ಜುಲೈ 14ರಂದು ಸಮಾಪನೆಯ ಪ್ರಸ್ತುತ ಗುರಿ” ಎಂದು ನಾಸಾ ಕಮರ್ಷಿಯಲ್ ಕ್ರೂ ಪ್ರೋಗ್ರಾಂನ ವ್ಯವಸ್ಥಾಪಕ ಸ್ಟೀವ್ ಸ್ವಿಚ್ ಹೇಳಿದ್ದಾರೆ.
- Advertisement -