ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಅಮೆರಿಕ: ಕೊರೊನಾ ಸಂಕಷ್ಟ ಕಾಲದಲ್ಲೂ ನಾಸಾ ಸಾಹಸಕ್ಕಿಳಿದಿದೆ. ಮಂಗಳ ಗ್ರಹದ ಸಂಶೋಧನೆಗಾಗಿ ನಾಸಾ ಹೊಸದೊಂದು ರೋವರ್ ಅನ್ನು ಕಳುಹಿಸಿಕೊಟ್ಟಿದೆ. ಈ ಹೊಸ ರೋವರ್ ಗೆ ಪರ್ ಸೆವರೆನ್ಸ್ ಎಂದು ಹೆಸರಿಡಲಾಗಿದೆ. ಇದು ಮಂಗಳನ ಅಂಗಳದಲ್ಲಿ ಪುರಾತನ ಜೀವಿಗಳ ಬಗ್ಗೆ ಸಂಶೋಧನೆ ನಡೆಸಲಿದೆ.
ಮಂಗಳ ಗ್ರಹದಲ್ಲಿ ಜೀವಿಗಳು ವಾಸಿಸುತ್ತಿದೆಯೋ ಎಂಬುದರ ಬಗ್ಗೆ ಅಧ್ಯಯನ ನಡೆಸಲಿದೆ.ಅಲ್ಲದೇ, ಈ ಬಗ್ಗೆ ಸಂಶೋಧಿಸಲಿರುವ ಮೊದಲ ರೋವರ್ ಎಂಬ ಹೆಗ್ಗಳಿಕೆಗೆ ಪರ್ ಸೆವರೆನ್ಸ್ ಸಾಕ್ಷಿಯಾಗಿದೆ.
And we have liftoff of the @ulalaunch Atlas V rocket carrying @NASAPersevere!
— NASA's Kennedy Space Center (@NASAKennedy) July 30, 2020
At 7:50 a.m. ET the rover began its seven-month journey to the Red Planet: https://t.co/A9sbAYbCl3 pic.twitter.com/MwOQHOkEdZ
ಪ್ಲೋರಿಡಾದಿಂದ ಈ ರೋವರ್ ಉಡ್ಡಯನಗೊಂಡಿದ್ದು, ರೋವರ್ ಹೊತ್ತ ರಾಕೆಟ್ ಅಲ್ಲಿನ ಸಮಯ ಬೆಳಗ್ಗೆ 7.50ಕ್ಕೆ ಲಾಂಚ್ ಆಗಿದೆ. ಇದು 18, 2021ಕ್ಕೆ ಮಂಗಳನ ಗ್ರಹದಲ್ಲಿ ಇಳಿಯಲಿದೆ. ಈ ರೋವರ್ ಸುಮಾರು 687 ದಿನಗಳ ಕಾಲ ಮಂಗಳನ ಅಂಗಳದಲ್ಲಿ ಸಂಶೋಧನೆ ನಡೆಸಲಿದೆ. ಇದು ಅಲ್ಲಿನ ಕಲ್ಲು, ಮಣ್ಣನ್ನು ಸಂಗ್ರಹಿಸಿ ಭೂಮಿಗೆ ತರಲಿದೆ.
ರೋವರ್ ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್
ಸುಮಾರು 20 ಸಾವಿರ ಕೋಟಿ ವೆಚ್ಚದ ಯೋಜನೆ ಇದಾಗಿದೆ. ಮಂಗಳ ಗ್ರಹದ ಮೇಲೆ ಅತ್ಯುತ್ತಮವಾಗಿ ಅಧ್ಯಯನ ನಡೆಸಲು ನಾಸಾ ಸಿದ್ಧಪಡಿಸಿದ ವಿಶಿಷ್ಟವಾದ ರೋವರ್ ಇದು. ಈ ರೋವರ್ ನಲ್ಲಿ 23 ಕ್ಯಾಮರಾ ಅಳವಡಿಸಲಾಗಿದೆ. ಅಲ್ಲದೇ, ಮಂಗಳನ ಅಂಗಳದ ನೆಲ ಅಗೆಯಲು ಸಹಾಯಕವಾಗುವಂತೆ 1 ಡಿಲ್ಲರ್ ಕೂಡ ಇದೆ.