Wednesday, April 24, 2024
spot_imgspot_img
spot_imgspot_img

ರಾಷ್ಟ್ರೀಯ ಶಿಕ್ಷಣ ನೀತಿ ನವಭಾರತದ ಸಂಕೇತ: ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ನೂತನ ಶಿಕ್ಷಣ ನೀತಿ ರಾಷ್ಟ್ರವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹೊಸ ಶಿಕ್ಷಣ ನೀತಿ ಜಾರಿ ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ ನೀತಿಯಲ್ಲಿ ಮಹತ್ತರ ಬದಲಾವಣೆ ಅತ್ಯಗತ್ಯ. ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದು ದೊಡ್ಡ ಸವಾಲು. ಶಿಕ್ಷಣ ನೀತಿ ಜಾರಿಗೊಳಿಸುವಲ್ಲಿ ಜನರ, ಶಿಕ್ಷಕರ,ವಿದ್ಯಾರ್ಥಿಗಳ ಸಹಕಾರ ಅಗತ್ಯ. ಎಲ್ಲರ ನಿಗಾ ಹೊಸ ಶಿಕ್ಷಣ ನೀತಿ ಮೇಲಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ನವಭಾರತದ ಸಂಕೇತ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರೀ ಬದಲಾವಣೆಯಾಗುತ್ತಿದೆ. ಹಲವಾರು ವರ್ಷಗಳ ಅಧ್ಯಯನ, ಅವಲೋಕನದ ಬಳಿಕ ಬದಲಾವಣೆ ಆಗುತ್ತಿದೆ. ಆಧುನಿಕ ಭಾರತಕ್ಕಾಗಿ ಹೊಸ ಶಿಕ್ಷಣ ನೀತಿ ಜಾರಿಯಾಗಲಿದೆ ಎಂದು ತಿಳಿಸಿದರು.

ನವಭಾರತಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಪಾಯ:

ಶಿಕ್ಷಣ ನೀತಿಯಲ್ಲಿ ಮಹತ್ತರ ಬದಲಾವಣೆ ಅನಿವಾರ್ಯ. ಹೊಸ ಶಿಕ್ಷಣ ನೀತಿ ಭಾರತದ ಅಭಿವೃದ್ಧಿ ಮೇಲೆ ಪರಿಣಾಮ ಬೀರಲಿದೆ. ಶಿಕ್ಷಣ ಅನ್ನೋದು ಎಲ್ಲರ ಜೀವನದ ಅವಿಭಾಜ್ಯ ಅಂಗ. ಹೊಸ ಶಿಕ್ಷಣ ನೀತಿಯಲ್ಲಿ ಯಾವುದೇ ಬೇಧ-ಭಾವ ಇಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಭಾರತ ಸ್ವಾವಲಂಬಿಯಾಗಬೇಕಿದೆ. ನವಭಾರತಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಪಾಯ. ಹೊಸ ಶಿಕ್ಷಣ ನೀತಿಯಡಿಯಲ್ಲಿ ಉನ್ನತ ಶಿಕ್ಷಣ ಸುಧಾರಣೆ ಅತ್ಯಗತ್ಯ ಎಂದು ಹೇಳಿದರು.

ಕೌಶಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಒತ್ತು:

ಕೌಶಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಹೊಸ ವಿಶ್ವ ವ್ಯವಸ್ಥೆಯ ಸಮಯದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾಗುತ್ತಿದೆ. ಇಂದಿನ ಎಲ್ಲ ಮಾಹಿತಿಗಳು ಇಂಟರ್ ನೆಟ್ ನಲ್ಲಿ ಲಭ್ಯ. ಆದರೆ ಯಾವುದನ್ನು ಅರಿತುಕೊಳ್ಳಬೇಕು ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಶಿಕ್ಷಣ ನೀತಿ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಹೊಸ ಶಿಕ್ಷಣ ನೀತಿ ಯುವಕರನ್ನು ಇನ್ನಷ್ಟು ಕೌಶಲ್ಯಭರಿತವನ್ನಾಗಿಸುತ್ತದೆ. ಜಾಗತಿಕ ಮಟ್ಟದ ಶಿಕ್ಷಣಕ್ಕಾಗಿ ಈ ಮಹತ್ವದ ಬದಲಾವಣೆ ಮಾಡಲಾಗಿದೆ ಎಂದರು.

ಬೇರೆ-ಬೇರೆ ಕೋರ್ಸ್ ಗಳಿಗೆ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ:

ಭಾರತದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಜೀವಾನಾಧರಿತ, ಚಿಂತನೆ ಹೆಚ್ಚುವ ಶಿಕ್ಷಣ, ವಿದ್ಯಾರ್ಥಿಗಳು ತಮ್ಮ ಆಸಕ್ತಿಗನುಗುಣವಾಗಿ ಜೀವನದಲ್ಲಿ ಮುಂದುವರಿಯಬೇಕು. ನೂತನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಕಲಿಕೆಯ ಮಧ್ಯೆ ಕೋರ್ಸ್ ಬದಲಾಯಿಸಬಹುದು. ಸದ್ಯ ಓದುತ್ತಿರುವ ಕೋರ್ಸ್ ಬಗ್ಗೆ ಆಸಕ್ತಿ ಇಲ್ಲ ಅಂದ್ರೆ ಬದಲಾವಣೆ ಮಾಡಬಹುದು. ತಮ್ಮ ಆಸಕ್ತಿಕರ ಕೋರ್ಸ್ ಯಾವುದು ಎಂದು ಅರಿತು ಬದಲಾವಣೆ ಮಾಡಬಹುದು. ಬೇರೆ-ಬೇರೆ ಕೋರ್ಸ್ ಗಳಿಗೆ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಎಂದು ಹೇಳಿದರು.

ಟ್ಯಾಲೆಂಟ್ ಮತ್ತು ಟೆಕ್ನಾಲಜಿಗೆ ಒತ್ತು:

ಹೊಸ ಶಿಕ್ಷಣ ನೀತಿಯಲ್ಲಿ ಟ್ಯಾಲೆಂಟ್ ಮತ್ತು ಟೆಕ್ನಾಲಜಿಗೆ ಒತ್ತು ನೀಡಲಾಗುವುದು. ಕಂಪ್ಯೂಟರ್ ಶಿಕ್ಷಣ, ಸಂಶೋಧನೆ, ಕೋಡಿಂಗ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಲ್ಯಾಬ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ದೇಶದ ವಿದ್ಯಾರ್ಥಿಗಳು ಸಂಶೋಧನೆಗಳತ್ತ ಹೆಚ್ಚಿನ ಆಸಕ್ತಿ ತೋರಬೇಕು. ಹೊಸ ಶಿಕ್ಷಣ ನೀತಿಯಲ್ಲಿ ಪುಸ್ತಕದ ಹೊರೆ ಕಡಿಮೆಯಾಗಲಿದೆ ಎಂದರು.

ಶಿಕ್ಷಣದ ಪ್ರಮುಖ ಉದ್ದೇಶ ವ್ಯಕ್ತಿತ್ವ ವಿಕಸನ:

ದೇಶದಲ್ಲಿ ಶಿಕ್ಷಣ ಸಂಸ್ಥೆಗಳು ಇನ್ನಷ್ಟು ಅಭಿವೃದ್ಧಿಯಾಗಬೇಕು. ಕಾಲೇಜುಗಳಲ್ಲಿ ಶಿಕ್ಷಣ ಕ್ವಾಲಿಟಿ ಇನ್ನಷ್ಟು ಅಭಿವೃದ್ಧಿಯಾಗಬೇಕು. ದೇಶದ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಅಟಾನಮಿ ಅನುಮತಿ ನೀಡಲಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಅಟಾನಮಿಗೊಳಿಸಿರುವುದು ಕಾಂತ್ರಿಕಾರಕ ನಿರ್ಧಾರ. ಶಿಕ್ಷಣದ ಪ್ರಮುಖ ಉದ್ದೇಶವೇ ವ್ಯಕ್ತಿತ್ವ ವಿಕಸನ ಎಂದು ಹೇಳಿದರು.

- Advertisement -

Related news

error: Content is protected !!