Wednesday, July 2, 2025
spot_imgspot_img
spot_imgspot_img

ಮಾದಕ ದ್ರವ್ಯ ಜಾಲದ ನಂಟು- ಮಹಾರಾಷ್ಟ್ರದ ಹಿರಿಯ ಸಚಿವ ನವಾಬ್ ಮಲಿಕ್ ಅಳಿಯ ಸಮೀರ್ ಖಾನ್ ಬಂಧನ!

- Advertisement -
- Advertisement -

ಮುಂಬೈ: ಮಾದಕ ದ್ರವ್ಯ ಜಾಲದ ನಂಟಿನ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಹಿರಿಯ ಸಚಿವ ನವಾಬ್ ಮಲಿಕ್ ಅಳಿಯ ಸಮೀರ್ ಖಾನ್ ನನ್ನು ಎನ್ ಸಿ ಬಿ ಬಂಧಿಸಿದೆ.

ಖಾರ್ ಮೂಲದ ವ್ಯಕ್ತಿಯೊಬ್ಬನಿಂದ ವಿದೇಶದಿಂದ ತರಿಸಲಾದ 200 ಕಿಲೋ ಗಾಂಜಾ ವಶಪಡಿಸಿದ ಬಳಿಕ ಸಮೀರ್ ಖಾನ್ ನನ್ನು ಕೂಡ ಬಂಧಿಸಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಮಾದಕ ದ್ರವ್ಯ ಜಾಲದಲ್ಲಿ ಸಮೀರ್ ಖಾನ್ ಸಕ್ರಿಯ ಪಾತ್ರ ವಹಿಸಿರುವ ಸಾಕ್ಷ್ಯಾಧಾರ ದೊರೆತಿದೆ ಎಂದು ವರದಿಯಾಗಿದೆ.

ಸಮೀರ್ ಖಾನ್ ಹೈ ಎಂಡ್ ಪಾರ್ಟಿಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದ. ಜತೆಗೆ ಸಮಾಜದ ಉನ್ನತ ವಲಯದಲ್ಲಿ ಸಾಕಷ್ಟು ಪ್ರಭಾವ ಕೂಡ ಹೊಂದಿದ್ದಾನೆ ಎಂದು ವರದಿಯಾಗಿದೆ.

ನವಾಬ್ ಮಲಿಕ್, ಎನ್ ಸಿ ಪಿ ಪಕ್ಷದ ಹಿರಿಯ ಸದಸ್ಯರಾಗಿದ್ದು, ಇದೀಗ ಉದ್ದವ್ ಠಾಕ್ರೆ ನೇತೃತ್ವದ ಸಂಪುಟದಲ್ಲಿ ಸಚಿವರಾಗಿದ್ದಾರೆ.

- Advertisement -

Related news

error: Content is protected !!