Wednesday, May 15, 2024
spot_imgspot_img
spot_imgspot_img

ಬಾಲಕನ ಶ್ವಾಸಕೋಶದಲ್ಲಿ ಸೂಜಿ ಪತ್ತೆ

- Advertisement -G L Acharya panikkar
- Advertisement -

ದೆಹಲಿಯ ಏಮ್ಸ್​ ಆಸ್ಪತ್ರೆಯ ವೈದ್ಯರು ಅಯಸ್ಕಾಂತ ಬಳಸಿ 7 ವರ್ಷದ ಬಾಲಕನ ಶ್ವಾಸಕೋಶದಿಂದ ಸೂಜಿಯನ್ನು ಹೊರತೆಗೆದಿರುವ ಘಟನೆ ನಡೆದಿದೆ.

ಬಾಲಕನಿಗೆ ವಿಪರೀತ ಕೆಮ್ಮು ಆರಂಭವಾಗಿದ್ದು ಬಳಿಕ ರಕ್ತ ವಾಂತಿ ಮಾಡಿದ್ದಾನೆ ಇದರಿಂದ ಗಾಬರಿಗೊಂಡ ಪೋಷಕರು ಬಾಲಕನನ್ನು ದೆಹಲಿಯ
ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿ ಬಾಲಕನನ್ನು ಎಂಡೋಸ್ಕೋಪಿ ಪರೀಕ್ಷೆಗೆ ಒಳಪಡಿಸಲಾಗಿತ್ತು ಈ ವೇಳೆ ಬಾಲಕನ ಎಡ ಶ್ವಾಸಕೋಶದ ಭಾಗದಲ್ಲಿ ಸುಮಾರು 4 ಸೆಂ.ಮೀ ಉದ್ದದ ಸೂಜಿಯೊಂದು ಪತ್ತೆಯಾಗಿದೆ.

ಈ ಕುರಿತು ಹೇಳಿಕೆ ನೀಡಿದ್ದ ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ.ವಿಶೇಶ್ ಜೈನ್ ಸಾಂಪ್ರದಾಯಿಕವಾಗಿ ಶ್ವಾಸಕೋಶಕ್ಕೆ ಹೊಕ್ಕಿದ್ದ ಸೂಜಿಯನ್ನು ಹೊರತೆಗೆಯುವುದು ಕಷ್ಟ ಸಾಧ್ಯವಾಗಿತ್ತು ಹಾಗಾಗಿ ಇದನ್ನು ಹೊರ ತೆಗೆಯಲು ಹೊಸ ಪ್ರಯೋಗಕ್ಕೆ ಮುಂದಾಗಬೇಕಾಯಿತು ಎಂದು ಹೇಳಿದ್ದಾರೆ.

ಡಾ.ವಿಶೇಶ್ ಜೈನ್ ಹಾಗೂ ಇತರ ನುರಿತ ವೈದ್ಯರ ತಂಡ ಬಾಲಕನ ಶ್ವಾಸಕೋಶದಲ್ಲಿ ಸಿಲುಕಿದ ಸೂಜಿಯನ್ನು ಹೊರತೆಗೆಯಲು ‘ಮ್ಯಾಗ್ನೆಟಿಕ್ ಸರ್ಜರಿ’ ನಡೆಸಲು ಮುಂದಾಗಿದೆ ಇದರ ಮೂಲಕ ಅಯಸ್ಕಾಂತ ಬಳಸಿ ಸೂಜಿಯನ್ನು ಹೊರತೆಗೆಯುವ ಹೊಸ ಪ್ರಯೋಗಕ್ಕೆ ವೈದಯರ ತಂಡ ಮುಂದಾಯಿತು, ಆದರೆ ಇದರ ನಡುವೆ ವೈದ್ಯರಿಗೆ ಇನ್ನೊಂದು ಸವಾಲು ಎದುರಾಗಿತ್ತು ಅದೇನೆಂದರೆ ಇದುವರೆಗೆ ಬಾಲಕನ ಶ್ವಾಸಕೋಶದ ನಾಳದ ಒಳಗೆ ಹೋಗುವಂತಹ ಅಯಸ್ಕಾಂತ ಹುಡುಕುವುದು ಆದರೆ ವೈದ್ಯರ ಪ್ರಯತ್ನದ ಫಲವಾಗಿ ಅಯಸ್ಕಾಂತ ಹೇಗೋ ಸಿಕ್ಕಿತು ಆ ಬಳಿಕ ಅದನ್ನು ಎಂಡೋಸ್ಕೋಪಿ ಉಪಕರಣದ ತುದಿಗೆ ಅಳವಡಿಸಿ ಬಾಲಕನ ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಸೂಜಿಯನ್ನು ಹೊರತೆಗೆಯುವಲ್ಲಿ ಏಮ್ಸ್ ವೈದ್ಯರ ತಂಡ ಯಶಸ್ವಿಯಾಗಿದೆ. ಈಗ ಬಾಲಕನ ಸ್ಥಿತಿ ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

- Advertisement -

Related news

error: Content is protected !!