Sunday, October 6, 2024
spot_imgspot_img
spot_imgspot_img

ಕುಡ್ಲದ `ನೀರ್ ದೋಸೆ’ ಮೆಚ್ಚಿದ ಕೊಹ್ಲಿ !

- Advertisement -
- Advertisement -

ಮುಂಬೈ: ಕರಾವಳಿ ಭಾಗದ ಖಾದ್ಯಗಳಲ್ಲಿ ನೀರುದೋಸೆ ಬಹಳ ಫೇಮಸ್‌. ಇಲ್ಲಿನ ಮನೆಗಳಲ್ಲಿ, ಹೊಟೇಲ್‌ಗ‌ಳಲ್ಲಿ ನೀರು ದೋಸೆ ತಪ್ಪಿಸುವುದಿಲ್ಲ. ಹೊರ ರಾಜ್ಯದವರೂ ಕರಾವಳಿಯ ಈ ಖಾದ್ಯವನ್ನು ಬಹಳ ಇಷ್ಟಪಡುತ್ತಾರೆ.

ಕೊಹ್ಲಿಯ ಮುಂಬೈ ಫ್ಲ್ಯಾಟ್‍ನ ಹತ್ತಿರ  ಶ್ರೇಯಸ್ ಕೂಡ ಫ್ಲ್ಯಾಟ್ ಹೊಂದಿದ್ದಾರೆ. ನಿನ್ನೆ (ಬುಧವಾರ) ಕೊಹ್ಲಿ ಮನೆಗೆ ಶ್ರೇಯಸ್ ತನ್ನ ತಾಯಿ ಮಾಡಿದ ಮಂಗಳೂರು ನೀರ್ ದೋಸೆ ಜೊತೆ ತೆರಳಿದ್ದರು. ಇದರ ರುಚಿ ನೋಡಿ ಕೊಹ್ಲಿ ಅತೀವ ಸಂತಸಗೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ನನ್ನ ಮನೆಯ 500 ಮೀಟರ್‌ ದೂರದಲ್ಲಿರುವ ನೆರೆಮನೆಯವರು ನೀರು ದೋಸೆ ನೀಡಿ ನಮ್ಮನ್ನು ಖುಷಿಪಡಿಸಿದರು. ಇಂಥ ರುಚಿಕರವಾದ ದೋಸೆ ತಿನ್ನದೆ ಕೆಲವು ವರ್ಷಗಳೇ ಆದವು. ನಿಮ್ಮ ತಾಯಿಗೆ ಧನ್ಯವಾದಗಳು’ ಎಂದು ಕೊಹ್ಲಿ ಟ್ವೀಟ್‌ ಮಾಡಿದ್ದಾರೆ. ವಿರಾಟ್‌ ಕೊಹ್ಲಿ ಇದಕ್ಕೆ ಪ್ರತಿಯಾಗಿ ಅಯ್ಯರ್‌ ಮನೆಗೆ ಮಶ್ರೂಮ್‌ ಬಿರಿಯಾನಿ ಕಳುಹಿಸಿ ಕೊಟ್ಟು, ಇದು ನಿಮಗೆ ಇಷ್ಟವಾಗುತ್ತದೆಂಬ ನಂಬಿಕೆ ಇದೆ ಎಂದಿದ್ದಾರೆ. ಕೊಹ್ಲಿ ಅವರ ನೀರುದೋಸೆ ಪ್ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Related news

error: Content is protected !!