Wednesday, May 15, 2024
spot_imgspot_img
spot_imgspot_img

ಅಮಿತ್‌ ಶಾ ಭೇಟಿಯಾದ ನೇಹಾ ಪೋಷಕರು : ಫಯಾಜ್​ಗೆ 90 ದಿನದಲ್ಲಿ ಗಲ್ಲು ಶಿಕ್ಷೆಯಾಗಬೇಕೆಂದು ಮನವಿ

- Advertisement -G L Acharya panikkar
- Advertisement -
This image has an empty alt attribute; its file name is VC_PUC_-1-819x1024.jpg

ಹುಬ್ಬಳ್ಳಿ ನಗರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಕೊಲೆಯಾದ ನೇಹಾ ಹಿರೇಮಠ ಕುಟುಂಬಸ್ಥರು ಬುಧವಾರ ಭೇಟಿಯಾದರು.

ಹುಬ್ಬಳ್ಳಿಯಲ್ಲಿ ಅಮಿತ್‌ ಶಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ನೇಹಾ ಹಿರೇಮಠ ತಂದೆ, ತಾಯಿ ಹಾಗೂ ಸಹೋದರನನ್ನು ಭೇಟಿ ಮಾಡಿದರು.

ಭೇಟಿ ಬಳಿಕ ಮಾತನಾಡಿದ ನೇಹಾ ತಂದೆ, ನಮ್ಮ ಮಗಳ ಹತ್ಯೆ ಪ್ರಕರಣದಲ್ಲಿ ಅಮಿತ್ ಶಾ ಬಹಳಷ್ಟು ಗಂಭೀರವಾಗಿದ್ದಾರೆ. ನಮ್ಮ ಜೊತೆಗೆ ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದರು. ನಿಮ್ಮ ಪರವಾಗಿ ನಾವು ಇದ್ದೇವೆ ಅಂತಾ ಧೈರ್ಯ ಹೇಳಿದರು ಎಂದರು. ಹಾಡಹಗಲೇ ಕಾಲೇಜು ಆವರಣದಲ್ಲಿ ನೇಹಾ ಬರ್ಬರ ಹತ್ಯೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಿರ್ಭಯಾ ಕಾಯ್ದೆಯಂತೆ ನೇಹಾ ಕಾಯ್ದೆ ತಂದು ನೇಹಾ ಹಂತಕ ಫಯಾಜ್​ಗೆ 90 ದಿನದಲ್ಲಿ ಗಲ್ಲು ಶಿಕ್ಷೆಯಾಗಬೇಕೆಂದು ಮನವಿ ಸಲ್ಲಿಸಿದ್ದೇನೆ. ಜೊತೆಗೆ ಫಾಸ್ಟ್​ಟ್ರ್ಯಾಕ್ ಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆಯಬೇಕು. ಬೇರೆ ಹೆಣ್ಣುಮಕ್ಕಳಿಗೆ ಇಂತಹ ಅನ್ಯಾಯವಾಗದಂತೆ ಕ್ರಮಕ್ಕೆಒತ್ತಾಯಿಸಿದ್ದೇನೆ ಎಂದರು.

ಕೊಲೆ ಆರೋಪಿಗೆ ಉಗ್ರ ಶಿಕ್ಷೆಯಾಗುವ ನಿಟ್ಟಿನಲ್ಲಿ ವಿಶೇಷ ಕಾಯ್ದೆ ತರಲು ಮನವಿ ಮಾಡಿದ್ದೇವೆ. ಈ ಬಗ್ಗೆ ಮನವಿ ಪತ್ರ ನೀಡಿದ್ದೇವೆ. ನಮ್ಮ ಮನವಿಗೆ ಅಮಿತ್‌ ಶಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

- Advertisement -

Related news

error: Content is protected !!