Saturday, May 4, 2024
spot_imgspot_img
spot_imgspot_img

ನೆಲ್ಯಾಡಿ: ಹಾರ್ಡ್‌ವೇರ್ ಅಂಗಡಿಗೆ ನುಗ್ಗಿದ ಕಳ್ಳರು; ಸುಮಾರು 2 ಲಕ್ಷ ಮೌಲ್ಯದ ಹಣ ಹಾಗೂ ಅಂದಾಜು 15 ಲಕ್ಷದ ವಸ್ತುಗಳು ಕಳವು

- Advertisement -G L Acharya panikkar
- Advertisement -

ನೆಲ್ಯಾಡಿ: ಕೆ.ಜೆ.ಕೆ ಟವರ್ಸ್‌‌ನಲ್ಲಿ ಕಾರ್ಯಾಚರಿಸುತ್ತಿರುವ ಜಗದಾಂಬಾ ಏಜೆನ್ಸಿಸ್‌ ಎಲೆಕ್ಟಿಕಲ್ ಅಂಡ್ ಪ್ಲಂಬಿಂಗ್ ಹಾರ್ಡ್‌ವೇರ್ ಮಳಿಗೆಗೆ ಅ.17ರ ರಾತ್ರಿ ಕಳ್ಳರು ನುಗ್ಗಿದ ಘಟನೆ ನಡೆದಿದೆ.

ಮನೋಹರ್ ಸಿಂಗ್ ಎಂಬವರ ಮಾಲಕತ್ವದ ಅಂಗಡಿಯಲ್ಲಿ, ಸುಮಾರು 2 ಲಕ್ಷ ಮೌಲ್ಯದ ಹಣ ಹಾಗೂ ಅಂದಾಜು 15 ಲಕ್ಷದ ವಸ್ತುಗಳು ಕಳವಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಅಂಗಡಿಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದ ಡಿವಿಯರ್ ಬಾಕ್ಸ್ ಅನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ.

ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರುಕ್ಕಯ ನಾಯ್ಕ್‌, ನೆಲ್ಯಾಡಿ ಹೊರಠಾಣೆಯ ಕುಶಾಲಪ್ಪ ನಾಯ್ಕ್‌, ಪ್ರತಾಪ್, ನವೀನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಂಗಳೂರಿನಿಂದ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

- Advertisement -

Related news

error: Content is protected !!