ಬಂಟ್ವಾಳ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನೇತ್ರಾವತಿ ನದಿ ನೀರಿನ ಹರಿವಿನಲ್ಲಿ ಹೆಚ್ಚಳವಾಗುತ್ತಿದೆ. ನದಿ ತೀರದ ಮನೆಗಳನ್ನು ಖಾಲಿ ಮಾಡಲಾಗಿದ್ದು, ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ಅವರಿಗೆ ಸೂಕ್ತ ವ್ಯವಸ್ಥೆಯನ್ನು ತಾಲೂಕು ಆಡಳಿತ ಕಲ್ಪಿಸಿದೆ.

ತಾಲೂಕು ತಹಶಿಲ್ದಾರ್ ರಶ್ಮಿ ಎಸ್.ಆರ್. ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್, ಗ್ರಾಮಾಂತರ ಎಸ್.ಐ.ಪ್ರಸನ್ನ, ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ.ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಸುರಕ್ಷಿತ ಕ್ರಮ ಕೈಗೊಂಡಿದ್ದಾರೆ.



ಬಂಟ್ವಾಳ ಜಕ್ರಿಬೆಟ್ಟು ರಸ್ತೆ ಗೆ ನೀರು ಬಿದ್ದು ಸಂಚಾರ ತಡೆ ಆಗಿದೆ. ಕಂಚಿಕಾರ ಪೇಟೆ ರಸ್ತೆಗೆ ನೀರು ನುಗ್ಗಿದೆ. ಬಡ್ಡಕಟ್ಟೆ ಮೀನು ಮಾರುಕಟ್ಟೆ, ಆಲಡ್ಕ ರಸ್ತೆ ಗೆ ನೀರು ಬಂದಿದ್ದು ಅಲ್ಲಿಯೂ ರಸ್ತೆ ಬಂದ್ ಆಗಿದೆ, ಆಲಡ್ಕ ಮಿಲಿಟರಿ ಮೈದಾನಕ್ಕೆ ನೀರು ನುಗ್ಗಿದ್ದು ಅಲ್ಲಿನ ಅನೇಕ ಮನೆಗಳು ಜಲಾವೃತವಾಗಿದೆ.
ಇತಿಹಾಸ ಪ್ರಸಿದ್ಧ ಜುಮ್ಮಾ ಮಸೀದಿ ಅಜಿಲಮೊಗರು ಇದರ ಸಭಾಂಗಣಕ್ಕೆ ಆವರಿಸಿದೆ ನೆರೆ ನೀರು.
ಗೆಸ್ಟ್ ಹೌಸ್ ಹಾಗೂ ಉಪ್ಪಿನಂಗಡಿ- ಬಂಟ್ವಾಳ್ ರಸ್ತೆ ಸಂಪೂರ್ಣ ಮುಳುಗಡೆಗೊಂಡಿದೆ.
ಹಲವಾರು ಕೃಷಿ ಹಾನಿಗೊಂಡಿದೆ.

