Thursday, May 2, 2024
spot_imgspot_img
spot_imgspot_img

ಬ್ಯಾಂಕ್ ಗಳ ಸಾಲ ಕಟ್ಟದಿದ್ದಲ್ಲಿ ಜಾಮೀನುದಾರರ ಮೇಲೆ ಕ್ರಮಕೈಗೊಳ್ಳಲಾಗುವುದು; ಸುಪ್ರಿಂ ಕೋರ್ಟ್ ತೀರ್ಪು!

- Advertisement -G L Acharya panikkar
- Advertisement -

ನವದೆಹಲಿ: ಸಾಲ ಪಡೆದವರು ಅದನ್ನು ತೀರಿಸಲು ವಿಫಲರಾದ ಸಂದರ್ಭದಲ್ಲಿ ಜಾಮೀನು ನೀಡಿದ್ದ ವ್ಯಕ್ತಿಗಳ ಮೇಲೆ ಕ್ರಮಕೈಗೊಳ್ಳಲು ಬ್ಯಾಂಕುಗಳಿಗೆ ಕಾನೂನಾತ್ಮಕ ಅಧಿಕಾರ ಸಿಕ್ಕಿದೆ. ಕೇಂದ್ರ ಸರ್ಕಾರದ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ ಅಡಿಯಲ್ಲಿ ಬ್ಯಾಂಕುಗಳಿಗೆ ಅಧಿಕಾರ ನೀಡುವ ಅಧಿಸೂಚನೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಕಾರ್ಪೊರೇಟ್ ಸಾಲಗಾರರಿಗೆ ಇಲ್ಲವೇ ಕಂಪನಿಗಳಿಗೆ ನೀಡಲಾದ ಸಾಲಕ್ಕೆ ಜಾಮೀನು ಕೊಡುವವರಿಗೆ ಎಚ್ಚರಿಕೆ ಸಂದೇಶವನ್ನು ಸುಪ್ರೀಂಕೋರ್ಟ್ ನೀಡಿದ್ದು, ಮಹತ್ವದ ತೀರ್ಪು ಪ್ರಕಟಿಸಿದೆ. ಸಾಲ ಪಡೆದವರಿಗೆ ಜಾಮೀನು ಹಾಕಿದ ವ್ಯಕ್ತಿಗಳು ಸಾಲದ ಮೊತ್ತವನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜಾಮೀನುದಾರರು ಕೂಡ ಸಾಲಕ್ಕೆ ಬಾಧ್ಯಸ್ಥರಾಗಿರುತ್ತಾರೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

- Advertisement -

Related news

error: Content is protected !!