- Advertisement -
- Advertisement -





ನವದೆಹಲಿ : 2026 ಫೆ.1( ಆದಿತ್ಯವಾರ) ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಸರ್ಕಾರವು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಬಜೆಟ್ ಮಂಡನೆಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ಮೂಲಗಳನ್ನ ಉಲ್ಲೇಖಿಸಿ ವರದಿ ತಿಳಿಸಿದೆ.
ವಾರಾಂತ್ಯದಲ್ಲಿ ಬಜೆಟ್ ಮಂಡಿಸುವುದು ಇದೇ ಮೊದಲಲ್ಲ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ 2025ರ ಬಜೆಟ್ ಮಂಡಿಸಿದರು. ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಫೆಬ್ರವರಿ 28 (ಶನಿವಾರ) ರಂದು 2015ರ ಬಜೆಟ್ ಮತ್ತು ಫೆಬ್ರವರಿ 28 (ಶನಿವಾರ) ರಂದು 2016ರ ಬಜೆಟ್ ಮಂಡಿಸಿದರು. ಪ್ರತಿ ವರ್ಷ ಫೆಬ್ರವರಿ 1ರಂದೇ ಬಜೆಟ್ ಮಂಡಿಸಲಾಗುತ್ತದೆ.
- Advertisement -








