Tuesday, March 2, 2021

ನೂತನ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಅಧಿಕಾರ ಸ್ವೀಕಾರ

ನವದೆಹಲಿ: ನೂತನ ಚುನಾವಣಾ ಆಯುಕ್ತರಾಗಿ ಮಾಜಿ ಹಣಕಾಸು ಕಾರ್ಯದರ್ಶಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ರಾಜೀವ್ ಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ.

2024ನೇ ಸಾಲಿನ ಲೋಕಸಭೆ ಚುನಾವಣೆ ರಾಜೀವ್ ಕುಮಾರ್ ಇವರ ಅವಧಿಯಲ್ಲೇ ನಡೆಯಲಿದೆ. ಇವರ ಅಧಿಕಾರವಧಿ 2025ರವರೆಗೂ ಇರಲಿದೆ. ಆಯುಕ್ತರಾಗಿದ್ದ ಅಶೋಕ್ ಲಾವಾಸ ಸ್ಥಾನದಲ್ಲಿ ರಾಜೀವ್ ಕುಮಾರ್ ಅಧಿಕಾರ ವಹಿಸಿಕೊಂಡರು. ಲಾವಾಸ ಅವರು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

1984ನೇ ಬ್ಯಾಚ್ ನ ಜಾರ್ಖಾಂಡ್ ಕೇಡರ್ ನ ನಿವೃತ್ತ ಐಎಎಸ್ ಅಧಿಕಾರಿ ರಾಜೀವ್ ಕುಮಾರ್ , ಸಾರ್ವಜನಿಕ ನೀತಿ ಮತ್ತು ಸುಸ್ಥಿರತೆಯಲ್ಲಿ ಮಾಸ್ಟರ್ಸ್ ಜೊತೆಗೆ ಬಿಎಸ್ಸಿ ಮತ್ತು ಎಲ್ಎಲ್ ಬಿ ಪದವಿ ಪಡೆದಿದ್ದಾರೆ.

ಕೇಂದ್ರ ಹಣಕಾಸು ಕಾರ್ಯದರ್ಶಿಯಾಗಿದ್ದ ರಾಜೀವ್ ಕುಮಾರ್ ಈ ವರ್ಷದ ಏ.29ರಂದು ನಿವೃತ್ತರಾಗಿದ್ದರು. ನಂತರ ಅವರನ್ನು ಸಾರ್ವಜನಿಕ ಉದ್ಯಮ ಆಯ್ಕೆ ಮಂಡಳಿ (ಪಿ.ಇ.ಎಸ್.ಬಿ) ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.

- Advertisement -

MOST POPULAR

HOT NEWS

Related news

LEAVE A REPLY

Please enter your comment!
Please enter your name here

error: Content is protected !!