Friday, June 27, 2025
spot_imgspot_img
spot_imgspot_img

ನವವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಪತಿಯ ಅಕ್ರಮ ಸಂಬಂಧದ ಶಂಕೆ

- Advertisement -
- Advertisement -

ಮದುವೆಯಾದ ಎರಡೇ ತಿಂಗಳಲ್ಲಿ ನವವಿವಾಹಿತೆಯೋರ್ವರು ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೇರಳದಲ್ಲಿ ನಡೆದಿದೆ. ಅರುವಿಕರ ಮೂಲದ ರೇಷ್ಮಾ(23) ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿ. ಪತಿಯ ಅಕ್ರಮ ಸಂಬಂಧದಿಂದ ಬೇಸತ್ತು ರೇಷ್ಮಾ ನೇಣಿಗೆ ಶರಣಾಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಬೆಳಗಿನ ಜಾವ ಮೂರು ಗಂಟೆ ವೇಳೆಗೆ ಸುಮಾರಿಗೆ ಮಲಗುವ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ರೇಷ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ವೇಳೆ ರೇಷ್ಮಾ ಪತಿ ಅಕ್ಷಯ್ ರಾಜ್ ಮನೆಯಲ್ಲಿ ಇರಲಿಲ್ಲ.

ಜೂನ್ 12 ರಂದು ಅಕ್ಷಯ್ ರಾಜ್ ಜೊತೆ ರೇಷ್ಮಾ ಮದುವೆ ನಡೆದಿತ್ತು. ಮದುವೆಯಾದ ಎರಡೇ ತಿಂಗಳಲ್ಲಿ ಪತಿಯ ಅಕ್ರಮ ಸಂಬಂಧದಿದ್ದ ನೊಂದು ರೇಷ್ಮಾ ತುಂಬಾ ಖಿನ್ನತೆಗೆ ಒಳಗಾಗಿದ್ದರು. ಪೊಲೀಸರ ಪ್ರಕಾರ ರೇಷ್ಮಾಗೆ ತನ್ನ ಪತಿ ಅಕ್ಷಯ್ ರಾಜ್ ಬೇರೆ ಮಹಿಳೆಗೆ ಫೋನ್ ಮಾಡಿ ಕರೆ ಮಾಡುತ್ತಿದ್ದಾಳೆ ಎಂಬ ಅನುಮಾನವಿತ್ತು. ಈ ಬಗ್ಗೆ ರೇಷ್ಮಾ ಬರೆದಿರುವ ಡೆತ್‌ನೋಟ್‌ವೊಂದು ಪೊಲೀಸರಿಗೆ ಸಿಕ್ಕಿದೆ.

ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತ್ನಿಯ ಸಾವಿನ ವಿಷಯ ತಿಳಿದು ಅಕ್ಷಯ್‌ ಮನೆಗೆ ಬಂದಿದ್ದು, ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

- Advertisement -

Related news

error: Content is protected !!