Saturday, June 28, 2025
spot_imgspot_img
spot_imgspot_img

ಅಡಕೆ ಟೀ ತಯಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದ ನಿವೇದನ್ ರಿಂದ ಮತ್ತೊಂದು ಹೊಸ ಪ್ರಯೋಗ

- Advertisement -
- Advertisement -

ಶಿವಮೊಗ್ಗ: ಅಡಕೆ ಟೀ ತಯಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಶಿವಮೊಗ್ಗ ಜಿಲ್ಲೆ ಮಂಡಗದ್ದೆಯ ಯುವ ಉದ್ಯಮಿ ನಿವೇದನ್ ನೆಂಪೆ ಈಗ ಅಡಕೆ ಶಾಂಪೂ ಸಂಶೋಧಿಸುವ ಮೂಲಕ ಹೊಸ ಪ್ರಯೋಗ ನಡೆಸಿದ್ದಾರೆ.

ಚಾಲಿ ಅಡಕೆಯಲ್ಲಿ ಪ್ರೊಲೀನ್‌ ಎಂಬ ಆಂಟಿ ಏಜೆಂಗ್‌ ಇದೆ. ಇದು ದೇಹದಲ್ಲಿನ ಸುಕ್ಕನ್ನು ಕಡಿಮೆ ಮಾಡುತ್ತದೆ. ಜತೆಗೆ ಗ್ಯಾಲಿಕ್‌ ಆ್ಯಸಿಡ್‌ ಎಂಬ ಆ್ಯಂಟಿ ಫಂಗಲ್‌ ಇದ್ದು, ಇದು ಜೆಮ್‌ರ್ಗಳನ್ನು ಸಾಯಿಸುತ್ತದೆ. ಈ ಅಂಶಗಳನ್ನು ಅಡಕೆಯಿಂದ ಪ್ರತ್ಯೇಕಿಸಿ ಈ ಶಾಂಪೂ ತಯಾರಿಸಲಾಗುತ್ತದೆ ಎಂದು ನಿವೇದನ್‌ ವಿವರಿಸಿದ್ದಾರೆ.

ರಾಜ್ಯದಲ್ಲಿ ಗುಟ್ಕಾ ನಿಷೇಧದ ಬಗೆಗೆ ವಿಚಾರಗಳು ಹರಿದಾಡುತ್ತಿದೆ. ಈ ಹೊತ್ತಿನಲ್ಲಿ ಗುಟ್ಕಾ ನೇತಾಡುತ್ತಿರುವ ಪ್ರತಿ ಅಂಗಡಿಗಳಲ್ಲಿಯೂ ನಮ್ಮ ಅಡಕೆ ಶಾಂಪೂ ಸ್ಯಾಚೆಟ್‌ ನೇತಾಡುತ್ತಿರಬೇಕು ಎನ್ನುತ್ತಾರೆ ನಿವೇದನ್.

- Advertisement -

Related news

error: Content is protected !!