Thursday, May 9, 2024
spot_imgspot_img
spot_imgspot_img

ಸೀಬೆ ಹಣ್ಣು ಮಾತ್ರವಲ್ಲ, ಇದರ ಎಲೆಗಳು ಕೂಡ ಅಷ್ಟೇ ಆರೋಗ್ಯಕಾರಿ!

- Advertisement -G L Acharya panikkar
- Advertisement -

ಹಣ್ಣು ಹಣ್ಣಾದ ಸೀಬೆ ಹಣ್ಣು ತಿಂದವರಿಗೆ ಗೊತ್ತು! ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅಚ್ಚುಮೆಚ್ಚಾಗಿರುವ ಈ ಹಣ್ಣಿನ ಮರ ಹಳ್ಳಿಕಡೆ ತುಂಬಾನೇ ನೋಡಲು ಸಿಗುತ್ತದೆ. ಆದರೆ ನಿಮಗೆ ಗೊತ್ತಿರಬಹುದು ನಾವೆಲ್ಲರೂ ಈ ರಸಭರಿತವಾದ ಸೀಬೆ ಹಣ್ಣುಗಳ ರುಚಿ ಆನಂದಿಸಿ ಎಲೆಗಳನ್ನು ನಿರ್ಲಕ್ಷಿಸಿ ಎಸೆಯುತ್ತಾರೆ.

ಸಾಮಾನ್ಯವಾಗಿ ಸೀಬೆ ಹಣ್ಣುಗಳು ವರ್ಷದ ಎಲ್ಲಾ ಸಮಯದಲ್ಲೂ ಸಿಗುವಂತಹ ಹಣ್ಣು. ಇದನ್ನು ಸೇವನೆ ಮಾಡಿದರೆ, ಅದರಿಂದ ಪ್ರತಿರೋಧಕ ಶಕ್ತಿ ವೃದ್ಧಿ ಆಗುವುದು ಮತ್ತು ಹಲವಾರು ರೀತಿಯ ಆರೋಗ್ಯ ಲಾಭಗಳು ದೇಹಕ್ಕೆ ಸಿಗುವುದು.
ಇನ್ನು ಸೀಬೆ ಹಣ್ಣು ಎಷ್ಟು ಆರೋಗ್ಯವೋ, ಈ ಹಣ್ಣಿನ ಎಲೆಗಳು ಕೂಡ ಅಷ್ಟೇ, ಆರೋಗ್ಯಕಾರಿ! ಹಿಂದಿನ ಕಾಲದಿಂದಲೂ ಸೀಬೆ ಹಣ್ಣಿನ ಜೊತೆ ಅದರ ಎಲೆಗಳನ್ನು ಜ್ವರ ಮತ್ತು ಉರಿಯೂತ ಕಡಿಮೆ ಮಾಡಲು ಬಳಸಿಕೊಂಡು ಬರಲಾಗುತ್ತಿದೆ. ಇದು ಮಧುಮೇಹ ನಿರ್ವಹಣೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಅನಾದಿ ಕಾಲದಿಂದಲೂ ಬಳಕೆಯಲ್ಲಿದೆ ಪೇರಲೆ ಎಲೆಗಳು ಪ್ರಮುಖ ಪೋಷಕಾಂಶಗಳ ಉಗ್ರಾಣವಾಗಿದೆ. ಎಲೆಗಳಲ್ಲಿ ಆಂಟಿ-ಆಕ್ಸಿಡೆಂಟ್‌ಗಳು, ಉರಿಯೂತ, ಬ್ಯಾಕ್ಟೀರಿಯಾ ವಿರೋಧಿ ಏಜೆಂಟ್‌ಗಳು ಸಮೃದ್ಧವಾಗಿವೆ. ಔಷಧಿಗಳ ಅವಲಂಬನೆ ಕಡಿಮೆ ಮಾಡುತ್ತದೆ.
ಹೊಟ್ಟೆಯ ಕಾಯಿಲೆಗಳು, ಆಗಾಗ್ಗೆ ಕಾಡುವ ಸೋಂಕುಗಳಿಗೆ ಚಿಕಿತ್ಸೆ ನೀಡಲು, ಚರ್ಮ ಮತ್ತು ಕೂದಲಿನ ಗುಣಮಟ್ಟವನ್ನು ಸುಧಾರಿಸಲು ಈ ಎಲೆಗಳನ್ನು ಅನಾದಿ ಕಾಲದಿಂದಲೂ ಭಾರತೀಯರು ಬಳಸುತ್ತಿದ್ದಾರೆ.

ಸೀಬೆ ಹಣ್ಣಿನ ಎಲೆಗಳಿಂದ ಮಾಡಿಕೊಂಡಿರುವ ಕಷಾಯವನ್ನು, ನಿಯಮಿತವಾಗಿ ಕುಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುವುದರ ಜೊತೆಗೆ, ಮಧುಮೇಹದಿಂದ ಕಾಡುವಂತಹ ಇತರ ಇತರ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು.
ಅಷ್ಟೇ ಅಲ್ಲದೇ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವುದರ ಜೊತೆಗೆ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ತುಂಬಾ ಸಹಕಾರಿ.

ಹಚ್ಚ ಹಸಿರಾದ ತಾಜಾ ಸೀಬೆ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ನೀರಿನಲ್ಲಿ ತೊಳೆದು ಜಜ್ಜಿ ಇಟ್ಟುಕೊಳ್ಳಿ.
ಒಂದು ವೇಳೆ ನೀವು ‘ ಆಟೋಪಿಕ್ ಡೆರ್ಮಟೈಟಿಸ್ ‘ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಮುಂದಾಗಿದ್ದರೆ ಆದಷ್ಟು ಒಣಗಿದ ಸೀಬೆ ಎಲೆಗಳನ್ನು ತೆಗೆದುಕೊಳ್ಳುವುದು ಉತ್ತಮ.
ಈಗ ಜಜ್ಜಿದ ಸೀಬೆಯ ಎಲೆಗಳನ್ನು ಕುದಿಯುವ ನೀರಿಗೆ ಹಾಕಿ ನೀರು ಕಂದು ಬಣ್ಣ ಬರುವವರೆಗೂ ಚೆನ್ನಾಗಿ ಕುದಿಸಿ.ಈ ನೀರನ್ನು ಉಗುರು ಬೆಚ್ಚಗೆ ಬರುವ ಹಾಗೆ ಆರಿಸಿ ನಂತರ ಒಂದು ಹತ್ತಿಯ ಉಂಡೆ ತೆಗೆದುಕೊಂಡು ನಿಮ್ಮ ಮುಖದ ಮೇಲೆ ಅಥವಾ ಹೆಚ್ಚಾಗಿ ಮೊಡವೆಗಳು, ಗುಳ್ಳೆಗಳು ಅಥವಾ ಕಲೆಗಳು ಕಂಡು ಬರುವ ಜಾಗದಲ್ಲಿ ಅನ್ವಯಿಸಿ.ಸುಮಾರು 15 ನಿಮಿಷಗಳ ಕಾಲ ಇದನ್ನು ಹಾಗೆ ಬಿಟ್ಟು ನಂತರ ತಂಪಾದ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ನಿಮ್ಮ ಚರ್ಮ ಸಂಬಂಧಿತ ಸಮಸ್ಯೆಗಳು ದೂರವಾಗುತ್ತವೆ.

ಆಟೋಪಿಕ್ ಡೆರ್ಮಟೈಟಿಸ್ ಸಮಸ್ಯೆಗೆ ನಿವಾರಣೆಗೆ ಒಣಗಿದ ಎಲೆಗಳನ್ನು ಪುಡಿ ಮಾಡಿಕೊಂಡು ಬಿಸಿ ನೀರಿನ ಒಂದು ಪಾತ್ರೆಗೆ ಹಾಕಿ ಅದರಲ್ಲಿ ಒಂದು ಸ್ವಲ್ಪ ಹೊತ್ತು ನೆನೆ ಹಾಕಿ ನಂತರ ಸಮಸ್ಯೆ ಇರುವ ನಿಮ್ಮ ಚರ್ಮದ ಭಾಗದ ಮೇಲೆ ಇದನ್ನು ಅನ್ವಯಿಸಿ. ವಾರದಲ್ಲಿ 3 ರಿಂದ 4 ಬಾರಿ ಇದೇ ರೀತಿ ಮಾಡುವುದರಿಂದ ‘ ಆಟೋಪಿಕ್ ಡೆರ್ಮಟೈಟಿಸ್ ‘ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.

- Advertisement -

Related news

error: Content is protected !!