Friday, July 11, 2025
spot_imgspot_img
spot_imgspot_img

ನ.17ರಿಂದ ಪದವಿ ಕಾಲೇಜು ಆರಂಭ

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ನ.17ರಿಂದ ಪದವಿ ಕಾಲೇಜು ಆರಂಭವಾಗಲಿದ್ದು, ಪ್ರಾಯೋಗಿಕ ತರಗತಿಗೆ ಆದ್ಯತೆ ನೀಡಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.


ಕಾಲೇಜು ಆರಂಭದಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಗಮನಿಸಿ, ಪ್ರಾಯೋಗಿಕ ತರಗತಿಗೆ ಆದ್ಯತೆ ನೀಡಲಾಗುವುದು. 25-30 ವಿದ್ಯಾರ್ಥಿಗಳ ಬದಲು 10-15 ವಿದ್ಯಾರ್ಥಿಗಳ ಗುಂಪು ರಚಿಸಿ ಪ್ರಾಯೋಗಿಕ ತರಗತಿ ನಡೆಸಲು ಕಾಲೇಜು ಶಿಕ್ಷಣ ಇಲಾಖೆ ನಿರ್ಧರಿಸಿದೆ. ತಾಂತ್ರಿಕ ಕೋರ್ಸ್‌ ಮತ್ತು ವಿಜ್ಞಾನ, ವಾಣಿಜ್ಯ ವಿಭಾಗದ ಪದವಿ ಕೋರ್ಸ್‌ಗಳಿಗೆ ಲ್ಯಾಬ್ ಕಲಿಕೆ ಅತಿ ಮುಖ್ಯವಾಗಿರುವುದರಿಂದ ಪ್ರಯೋಗಾತ್ಮಕ ಬೋಧನೆಗೆ ಆದ್ಯತೆ ನೀಡಲಾಗುವುದು ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಈ ಮೊದಲು 25ರಿಂದ 30 ವಿದ್ಯಾರ್ಥಿಗಳು ಏಕಕಾಲದಲ್ಲಿ ಲ್ಯಾಬೊರೇಟರಿ ಬಳಕೆ ಮಾಡುವ ವ್ಯವಸ್ಥೆಯಿತ್ತು. ಕೊರೋನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 10 ಅಥವಾ 15ಕ್ಕೆ ಇಳಿಸಲಿದ್ದೇವೆ. ದಿನಕ್ಕೆ ಒಂದು ಅಥವಾ ಎರಡು ತರಗತಿಗಳ ಬದಲಿಗೆ ದಿನಪೂರ್ತಿ ಲ್ಯಾಬ್‌ ಬಳಕೆಗೆ ಬೇಕಾದ ವ್ಯವಸ್ಥೆ ರೂಪಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಕಾಲೇಜು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.


ಕಾಲೇಜು ಆರಂಭದಲ್ಲೇ ಪ್ರಾಯೋಗಿಕ ತರಗತಿಗಳನ್ನು ಮುಗಿಸಿದರೆ, ಮುಂದಿನ ದಿನಗಳಲ್ಲಿ ಕೊರೋನಾ ಪರಿಸ್ಥಿತಿ ಸುಧಾರಿಸದಿದ್ದರೂ ಆನ್‌ಲೈನ್‌ ಅಥವಾ ಆಫ್ ‌ಲೈನ್‌ ಮೂಲಕ ಪಠ್ಯಕ್ರಮ ಪೂರ್ಣಗೊಳಿಸಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಬಹುದು ಎಂಬುದು ಇಲಾಖೆಯ ಯೋಚನೆಯಾಗಿದೆ ಎನ್ನಲಾಗಿದೆ.
ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಒಂದು ತರಗತಿ ಕೊಠಡಿಯಲ್ಲಿ ಗರಿಷ್ಠ 40 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಪ್ರೊ.ಎಸ್‌.ಮಲ್ಲೇಶ್ವರಪ್ಪ ತಿಳಿಸಿದ್ದಾರೆ.

- Advertisement -

Related news

error: Content is protected !!