Saturday, April 27, 2024
spot_imgspot_img
spot_imgspot_img

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಗ್ರಾಮೋತ್ಸವ ಸಂಪನ್ನ: ಬದುಕಿನಲ್ಲಿ ಇತಿಮಿತಿ ಇದ್ದಾಗ ಆರೋಗ್ಯಪೂರ್ಣ ಬದುಕು : ಒಡಿಯೂರು ಶ್ರೀ .

- Advertisement -G L Acharya panikkar
- Advertisement -

ವಿಟ್ಲ: ರಾಷ್ಟ್ರೀಯತೆಯನ್ನು ಉಳಿಸಿಕೊಳ್ಳಬೇಕು. ಮಾನವೀಯತೆಯಿರಬೇಕು. ಭಾಷೆ, ಸಂಸ್ಕೃತಿ ಉಳಿಸುವತ್ತ ಗಮನ ಹರಿಸಬೇಕು. ಧನಾತ್ಮಕ ಅಂಶಗಳನ್ನು ಮೈಗೂಡಿಸಿ, ಋಣಾತ್ಮಕ ಅಂಶಗಳನ್ನು ದೂರಮಾಡಬೇಕು. ಭಗವಂತನು ನೀಡಿದ ವಿವೇಕವನ್ನು ಜಾಗೃತಗೊಳಿಸಬೇಕು. ಬದುಕಿನಲ್ಲಿ ಇತಿಮಿತಿ ಇದ್ದಾಗ ಆರೋಗ್ಯಪೂರ್ಣ ಬದುಕು ಆಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಶ್ರೀಗಳವರ ಜನ್ಮದಿನೋತ್ಸವದ ಅಂಗವಾಗಿ ನಡೆದ ಶ್ರೀಗುರು ಪಾದುಕಾ ಆರಾಧನೆ ಮತ್ತು ಗ್ರಾಮೋತ್ಸವದ ಸಭೆಯಲ್ಲಿ ಆಶೀರ್ವಚನ ನೀಡಿದರು.

ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು, ಅಂತರ ಕಾಯ್ದುಕೊಂಡಾಗ ಮಹಾಮಾರಿ ಕೊರೊನಾವನ್ನು ಓಡಿಸಬಹುದು. ಬದುಕಿನಲ್ಲಿ ಬದಲಾವಣೆ ಆಗುತ್ತಿರಬೇಕು. ಪರಿವರ್ತನೆಗೆ ಒಗ್ಗಿಕೊಳ್ಳಬೇಕು. ಅದು ನಿಂತ ನೀರಲ್ಲ, ನದಿಯಂತೆ ಹರಿಯುತ್ತಿರಬೇಕು. ಪರೋಪಕಾರದ ಬದುಕು ಶ್ರೇಷ್ಠವಾಗಿದೆ. ಸಿಹಿಕಹಿಯಿಂದ ಕೂಡಿದ ಬದುಕಿನಲ್ಲಿ ಕಷ್ಟಗಳನ್ನು ಸೋಪಾನವಾಗಿಸಿ, ಮೆಟ್ಟಿ ನಿಲ್ಲುವಂತಾಗಬೇಕು. ಬದುಕಿನ ಉದ್ದೇಶ ಭಗವಂತನ ಸಾಕ್ಷಾತ್ಕಾರ ಎಂದರು.

ಸಾಧ್ವೀ ಶ್ರೀ ಮಾತಾನಂದಮಯೀ ಅವರು ಶ್ರೀಗಳವರ ಜನ್ಮದಿನೋತ್ಸವದ ಅಂಗವಾಗಿ ಶ್ರೀಗುರು ಪಾದುಕಾ ಆರಾಧನೆ ನೆರವೇರಿಸಿದರು.

ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ, ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರಗಳ ಪದಾಽಕಾರಿಗಳು ಉಪಸ್ಥಿತರಿದ್ದರು.
ಸಂತೋಷ್ ಭಂಡಾರಿ ಸ್ವಾಗತಿಸಿ, ವಂದಿಸಿದರು.

ಸೇವಾಕಾರ್ಯಗಳು :
ಗ್ರಾಮೋತ್ಸವದ ಅಂಗವಾಗಿ ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ವತಿಯಿಂದ ದ.ಕ. ಜಿಲ್ಲೆಯಲ್ಲಿ ಉಚಿತ ಹೊಲಿಗೆ ತರಬೇತಿ, ೨ ಭಾಗಗಳಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ನಡೆಸಲಾಗಿದೆ. ಕೋವಿಡ್-೧೯ರ ಸಂದರ್ಭದಲ್ಲಿ ೨೦೦೦ಕ್ಕೂ ಮಿಕ್ಕಿ ಮನೆಗಳಿಗೆ ದಿನಬಳಕೆ ಸಾಮಗ್ರಿ ವಿತರಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ೫ ಭಾಗಗಳಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ, ಕಾರ್ಕಳ-ಬೆಳ್ವಾಯಿ ಗ್ರಾಮದ ಘಟಸಮಿತಿ ವತಿಯಿಂದ ೨ ಶಾಲೆಯ ೬೦೦ ಮಕ್ಕಳಿಗೆ ಉಚಿತ ಸಮವಸ್ತ್ರ ನೀಡಲಾಗಿದೆ. ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಅನಾರೋಗ್ಯ ಚಿಕಿತ್ಸೆಗಾಗಿ, ಆಕಸ್ಮಿಕ ಘಟನೆ, ಪ್ರಕೃತಿ ವಿಕೋಪ ಸಂಘ-ಸಂಸ್ಥೆಗಳಿಗೆ, ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ, ಶೈಕ್ಷಣಿಕ ಚಟುವಟಿಕೆಗಳಿಗೆ, ಸ್ವ-ಉದ್ಯೋಗ, ಶಾಲಾಭಿವೃದ್ಧಿಗೆ, ಸಹಾಯ ಅಪೇಕ್ಷೆಗಳಿಗೆ ಸ್ಪಂದಿಸಲಾಗಿದೆ. ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇವರ ಮೂಲಕ ಗ್ರಾಮವಿಕಾಸ ಯೋಜನೆಯ ೧೭೧ ಸಿಬಂದಿಗಳಿಗೆ ಕ್ಷೇತ್ರದಿಂದ ಕೋವಿಡ್-೧೯ರ ಸಂದರ್ಭ ಕೋವಿಡ್ ಸಹಾಯಧನ ರೂ.೮,೫೫,೦೦೦/- ನೀಡಲಾಗಿದೆ. ಕೃಷಿ, ಕಾನೂನು, ಮಹಿಳಾ ಸಬಲೀಕರಣ, ನೈತಿಕ ಶಿಕ್ಷಣ, ಆರೋಗ್ಯದ ಅರಿವು, ವನಮಹೋತ್ಸವ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಗ್ರಾಮಗಳಲ್ಲಿ ಮಾಹಿತಿ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. ವಿಕಾಸವಾಹಿನಿ ಸದಸ್ಯರ ಪ್ರಗತಿಗಾಗಿ ಅಧ್ಯಯನ ಪ್ರವಾಸ, ಧಾರ್ಮಿಕ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗಿದೆ. ೫೧೪೩ ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ-ಸಹಾಯ ಸಂಘಗಳು ಕಾರ್ಯಾಚರಿಸುತ್ತಿದ್ದು, ೧೬೩ ಘಟಸಮಿತಿಗಳಿವೆ. ೧೦ ಬಾಲವಿಕಾಸ ಕೇಂದ್ರಗಳು ನಿರಂತರವಾಗಿ ನಡೆಯುತ್ತಿವೆ. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಘಟಕಗಳು ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಸುಮಾರು ೩೦ಕ್ಕಿಂತಲೂ ಮಿಕ್ಕಿ ಘಟಕಗಳು ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿವೆ.

- Advertisement -

Related news

error: Content is protected !!