Saturday, April 27, 2024
spot_imgspot_img
spot_imgspot_img

ಬೇಸಿಗೆ ಕಾಲದಲ್ಲಿ ಎ‍ಣ್ಣೆ ಚರ್ಮದವರು ಈ ಆಹಾರದಿಂದ ದೂರವಿರಿ

- Advertisement -G L Acharya panikkar
- Advertisement -

ಬೇಸಿಗೆಯಲ್ಲಿ ‍ಎಣ್ಣೆಯುಕ್ತ ಚರ್ಮದವರು ಹಲವು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅವರ ಚರ್ಮ ಎಣ್ಣೆಯಂಶವನ್ನು ಹೆಚ್ಚು ಉತ್ಪತ್ತಿ ಮಾಡುವುದರಿಂದ ಮೊಡವೆಗಳು ಮೂಡುತ್ತವೆ. ಹಾಗಾಗಿ ಬೇಸಿಗೆಕಾಲದಲ್ಲಿ ಎ‍ಣ್ಣೆ ಚರ್ಮದವರು ಈ ಆಹಾರದಿಂದ ದೂರವಿರಿ.

ಡೈರಿ ಉತ್ಪನ್ನಗಳಾದ ಹಾಲು, ಬೆಣ್ಣೆ, ತುಪ್ಪ, ಚೀಸ್ ಮುಂತಾದ ವಸ್ತುಗಳನ್ನು ಸೇವಿಸಬೇಡಿ. ಇದು ಚರ್ಮವನ್ನು ಮತ್ತಷ್ಟು ಎ‍ಣ್ಣೆಯುಕ್ತಗೊಳಿಸುತ್ತದೆ.

ಸಿಹಿ ತಿಂಡಿಗಳಾದ ಚಾಕೋಲೇಡ್, ಸ್ವೀಟ್ಸ್, ಸಕ್ಕರೆ, ಐಸ್ ಕ್ರೀಂ, ಬಿಸ್ಕತ್ತು ಮುಂತಾದವುಗಳನ್ನು ಸೇವಿಸಬೇಡಿ.

ಹುರಿದ ಪದಾರ್ಥಗಳು ಚರ್ಮಕ್ಕೆ ಹಾನಿ ಮಾಡುತ್ತವೆ. ಹಾಗಾಗಿ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನಬೇಡಿ.

ಸಂಸ್ಕರಿಸಿದ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕ ಮತ್ತು ಮೊಡವೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಅವುಗಳನ್ನು ಹೆಚ್ಚು ಸೇವಿಸಬೇಡಿ.

- Advertisement -

Related news

error: Content is protected !!