Saturday, May 4, 2024
spot_imgspot_img
spot_imgspot_img

ಮೊದಲ ರಾತ್ರಿಯಂದು ಕೋಣೆ ಸೇರಿದ ವಧುವಿಗೆ ಕಾಣಿಸಿಕೊಂಡ ಹೊಟ್ಟೆನೋವು; ವೈದ್ಯರ ಮಾತು ಕೇಳಿ ಬೆಚ್ಚಿ ಬಿದ್ದ ವರ..!

- Advertisement -G L Acharya panikkar
- Advertisement -

ಮೊದಲ ರಾತ್ರಿಯಂದು ವಧು ಕೋಣೆ ಸೇರುತ್ತಿದ್ದಂತೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಪರಿಕ್ಷಿಸಿದ ವೈದ್ಯರ ಮಾತು ಕೇಳಿ ವರ ಬೆಚ್ಚಿ ಬಿದ್ದ ಘಟನೆ ನಡೆದಿದೆ.

ಗ್ರೇಟರ್ ನೋಯ್ಡಾದ ಹಳ್ಳಿಯೊಂದರ ವ್ಯಕ್ತಿ ಸಿಕಂದ್ರಾಬಾದ್‌ನ ಯುವತಿಯೊಬ್ಬಳನ್ನು ಮದುವೆಯಾಗಿದ್ದಾನೆ. ಕಾರ್ಯಕ್ರಮವೆಲ್ಲ ಸುಸೂತ್ರವಾಗಿಯೇ ನಡೆದಿದೆ. ಅಂದು ರಾತ್ರಿ ವಧು-ವರರಿಬ್ಬರು ಕೋಣೆ ಸೇರಿದ್ದಾರೆ. ಈ ವೇಳೆ ಆಕೆಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿದ್ದು, ತಡ ಮಾಡದೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಏನಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದನ್ನು ಕೇಳಿದ ವರನಿಗೆ ಒಂದು ಕ್ಷಣ ಏನೂ ತೋಚದಂತಹ ಪರಿಸ್ಥಿತಿ.

ಹೊಟ್ಟೆ ನೋವೆಂದು ಆಸ್ಪತ್ರೆ ಸೇರಿದ ನವವಿವಾಹಿತೆಯನ್ನು ಪರೀಕ್ಷಿಸಿದ ವೈದ್ಯರು, ಈಕೆ ಏಳು ತಿಂಗಳ ಗರ್ಭಿಣಿ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದಾಗಿ ಒಂದು ದಿನ ಕಳೆಯುತ್ತಿದ್ದಂತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅಸಲಿಗೆ ಯುವತಿ ಮದುವೆಗೂ ಮೊದಲೇ ಗರ್ಭ ಧರಿಸಿದ್ದಳು. ಆದರೆ ಪಾಲಕರು ಮಗಳ ಈ ವಿಚಾರವನ್ನು ವರನ ಮನೆಯವರಿಗೆ ತಿಳಿಸದೆ ಮದುವೆ ಮಾಡಿದ್ದಾರೆ.

ಮದುವೆ ಮಾತುಕತೆ ವೇಳೆ ಮಗಳಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಇದರಿಂದಾಗಿ ಹೊಟ್ಟೆ ಸ್ವಲ್ಪ ಊದಿಕೊಂಡಿದೆ ಎಂದು ವರನ ಮನೆಯವರಿಗೆ ತಿಳಿಸಲಾಗಿತ್ತು. ಇದನ್ನು ನಂಬಿದ್ದ ಯುವಕ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದ. ಇದೀಗ ಆಕೆ ಮದುವೆಯಾಗಿ ಒಂದು ದಿನ ಕಳೆಯುತ್ತಿದ್ದಂತೆ ಹೆಣ್ಣು ಮಗುವಿಗೆ ಜನ್ಮ ನೀಡಿರುವುದನ್ನು ಕಂಡು ಆತ ಆಘಾತಕ್ಕೊಳಗಾಗಿದ್ದಾನೆ.

ಹೆರಿಗೆಯಾಗುತ್ತಿದ್ದಂತೆ ಯುವತಿ ಮನೆಯವರಿಗೆ ಮಾಹಿತಿ ನೀಡಲಾಗಿದೆ. ಅವರು ಸಿಕಂದ್ರಾಬಾದ್‌ನಿಂದ ಬಂದು ತಾಯಿ ಮತ್ತು ಮಗುವನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಎರಡೂ ಕುಟುಂಬಗಳು ಮಾತುಕತೆ ಮೂಲಕ ಒಪ್ಪಂದ ಮಾಡಿಕೊಂಡಿದ್ದು ನೂತನ ವಧು-ವರರು ದೂರವಾಗಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಘಟನೆಯ ಬಗ್ಗೆ ಮಾಹಿತಿ ಬಂದಿದೆ ಎಂದು ದಂಕೌರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂಜಯ್ ಸಿಂಗ್ ಹೇಳಿದ್ದಾರೆ.

- Advertisement -

Related news

error: Content is protected !!