Sunday, June 23, 2024
spot_imgspot_img
spot_imgspot_img

ವಿಟ್ಲ : ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ರೋಬೋಟಿಕ್ ಲ್ಯಾಬ್ ಉದ್ಘಾಟನೆ: ಸಾಮಾಜಿಕ ಕಲಿಕೆಗೆ ಬಯಲು ಶಾಲಾ ವಿದ್ಯಾರ್ಥಿಗಳಾಗಬೇಕು – ಡಾ.ಮೋಹನ ಆಳ್ವ

- Advertisement -G L Acharya panikkar
- Advertisement -

ವಿಟ್ಲ : ವಿಟ್ಲ ಬಸವನ ಗುಡಿಯಲ್ಲಿರುವ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ರೋಬೋಟಿಕ್ ಲ್ಯಾಬ್ ನ್ನು ಉದ್ಘಾಟಿಸಿದ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ.ಮೋಹನ ಆಳ್ವ ರವರು “ವಿದ್ಯಾರ್ಥಿಗಳೇ ದೇಶದ ಸಂಪತ್ತು”. ಇಂದು ಖಾಸಗಿ ಶಾಲೆಯ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ನಮ್ಮ ದೇಶದ ತಂತ್ರಜ್ಞಾನ ಬಳಸಿ ಯಶಸ್ವಿಯಾಗಿರುವುದು ಇದಕ್ಕೆ ಸಾಕ್ಷಿ. ಹಾಗೆಯೇ ವಿದ್ಯಾರ್ಥಿಗಳು ಪಠ್ಯದ ಜೊತೆಯಲ್ಲಿ ಸಾಂಸ್ಕೃತಿಕ ಕಲೆಗೂ ಹೆಚ್ಚಿನ ಒತ್ತನ್ನು ನೀಡಬೇಕು ಎಂದು ಹೇಳಿದರು .” ಜೀವನದಲ್ಲಿ ಸಾಮಾಜಿಕ ಕಲಿಕೆಗೆ ಬಯಲು ಶಾಲಾ ವಿದ್ಯಾರ್ಥಿಗಳಾಗಬೇಕು,ಕಲಿಕೆಗೆ ವಯೋಮಾನಗಳಿಲ್ಲ ಅದು ನಿರಂತರವಾದದು “ಎಂದರು ಶಾಲಾ ಅಧ್ಯಕ್ಷರಾದ ಎಲ್. ಎನ್.ಕೂಡೂರುರವರು ಶಾಲೆಯಲ್ಲಿ ಪ್ರತಿವರ್ಷವೂ ಹೊಸತನವನ್ನು ತರುವ ಪ್ರಯತ್ನ ಮಾಡುತ್ತೇವೆ, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ ವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.ಸ್ಟೆಮ್ ರೋಬೋಟಿಕ್ ಮ್ಯಾನೇಜರ್ ಸರ್ವೇಶ್ ರವರು ರೊಬೋಟಿಕ್ ತಂತ್ರಜ್ಞಾನವು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ತಂತ್ರಜ್ಞಾನದ ಹಾದಿ ತೋರಲಿದೆ.ಸ್ಟೆಮ್ ರೋಬೊ ಸಂಸ್ಥೆಯ ಹದಿನೈದು ಸಾವಿರ ಶಾಲೆಗಳಲ್ಲಿ ರೋಬೋಟಿಕ್ ತಂತ್ರಜ್ಞಾನವನ್ನು ಅಳವಡಿಸಿದ ಶಾಲೆಗಳಲ್ಲಿ ವಿಠ್ಠಲ್ ಜೇಸಿ ಸಂಸ್ಥೆ ಒಂದಾದರೆ ಮಂಗಳೂರು ವ್ಯಾಪ್ತಿಯಲ್ಲಿ ಪ್ರಥಮ ಸಂಸ್ಥೆ ಇದಾಗಿದೆ ಎಂದರು.


ಆಧುನಿಕ ಜಗತ್ತಿಗೆ ಪೂರಕವಾಗುವಂತೆ ಮಾಹಿತಿ ತಂತ್ರಜ್ಞಾನಕ್ಕೆ ವಿದ್ಯಾರ್ಥಿಗಳನ್ನು ಉನ್ನತೀಕರಿಸಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ರೋಬೋಟಿಕ್ ತಂತ್ರಜ್ಞಾನಗಳ ಬಳಕೆ ವಿದ್ಯಾರ್ಥಿಗಳನ್ನು ವೈಜ್ಞಾನಿಕ ಸಂಶೋಧನೆಗಳಿಗೆ ಆಸಕ್ತರಾಗುವಂತೆ ಮಾಡುವ ನೆಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ವಿಶಾಲವಾದ ರೋಬೋಟಿಕ್ ಪ್ರಯೋಗಾಲಯದಲ್ಲಿ ಶಾಲಾ 3ನೇ ತರಗತಿಯಿಂದ 7ನೇ ತರಗತಿಯ ಸುಮಾರು 500 ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಾ ತಮ್ಮ ಕ್ರಿಯಾಶೀಲತೆಗೆ ಅವಕಾಶ ಪಡೆಯಲಿದ್ದಾರೆ.ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಮೋಹನ ಎ, ನಿರ್ದೇಶಕ ಹಸನ್ ವಿಟ್ಲ, ಜತೆ ಕಾರ್ಯದರ್ಶಿ ಶ್ರೀ ಪ್ರಕಾಶ್, ಕೋಶಾಧಿಕಾರಿ ಪ್ರಭಾಕರ ಶೆಟ್ಟಿ, ನಿರ್ದೇಶಕ ವಿಜಯ್ ಪಾಯಿಸ್,ವಿಟ್ಲ ಜೆಸಿಐ ಅಧ್ಯಕ್ಷ ಸಂತೋಷ ಶೆಟ್ಟಿ ಪೆಲತಡ್ಕ ಆಡಳಿತಾಧಿಕಾರಿ ರಾಧಾಕೃಷ್ಣ,ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ,ಉಪಸ್ಥಿತರಿದ್ದರು.


ಶಾಲಾ ಪ್ರಾಂಶುಪಾಲ ಜಯರಾಮ ರೈ ಸ್ವಾಗತಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಸಮಾರಂಭದಲ್ಲಿ ವಿದ್ಯಾರ್ಥಿಗಳು ಪೋಷಕರು ಶಿಕ್ಷಕರು ಶಿಕ್ಷಕೇತರ ವರ್ಗ ಹಾಗೂ ವಿಟ್ಲ ಸ್ಥಳೀಯ ಸಂಸ್ಥೆಗಳ ಸ್ಕೌಟ್ ಗೈಡ್ ಶಿಕ್ಷಕರು ಉಪಸ್ಥಿತರಿದ್ದರು. ಸಹ ಶಿಕ್ಷಕಿ ಉಷಾ ಪ್ರಕಾಶ್ ರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

- Advertisement -

Related news

error: Content is protected !!