Tuesday, May 14, 2024
spot_imgspot_img
spot_imgspot_img

ಸಂಘಟನಾ ಚಟುವಟಿಕೆಗಳು ಒಳಿತಿಗೆ ಪ್ರೇರಣೆ ನೀಡುತ್ತದೆ -ಬಶೀರ್ ಝುಹ್ರಿ ಸೂರಿಕುಮೇರು

- Advertisement -G L Acharya panikkar
- Advertisement -

ಮಾಣಿ : ಸುನ್ನತ್ ಜಮಾಅತಿನ ಆಶಯ ಆದರ್ಶದಲ್ಲಿ ಕಾರ್ಯಾಚರಿಸುವ ಸಂಘಟನೆಗಳ ಕಾರ್ಯಚಟುವಟಿಕೆಗಳು ಒಳಿತು ಮಾಡಲು ಹೆಚ್ಚೆಚ್ಚು ಪ್ರೇರಣೆ ನೀಡುತ್ತದೆ ಮತ್ತು ಸಜ್ಜನರೊಂದಿಗಿನ ಈ ಸಂಪರ್ಕವು ಧಾರ್ಮಿಕ ಚೌಕಟ್ಟಿನಲ್ಲಿ ಜೀವಿಸಲು ಕಲಿಸುತ್ತದೆ ಎಂದು ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಸೂರಿಕುಮೇರು ಹೇಳಿದರು. ಅವರು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ಹಾಗೂ ಎಸ್ಸೆಸ್ಸೆಫ್ ಸೂರಿಕುಮೇರು ಇದರ ವತಿಯಿಂದ ಚಿಕನ್ ಉಮ್ಮರ್ ಸೂರಿಕುಮೇರು ರವರ ನಿವಾಸದಲ್ಲಿ ನಡೆದ ಕುತುಬಿಯ್ಯತ್ ರಾತೀಬ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.

ಅಶ್ರಫ್ ಸಖಾಫಿ ಸೂರಿಕುಮೇರು ಕಾರ್ಯಕ್ರಮ ಉದ್ಘಾಟಿಸಿದರು,ಶಬೀರ್ ಅಹ್ಸನಿ ದಾರುಲ್ ಇರ್ಶಾದ್ ದುಆ ಮಾಡಿದರು, ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಮಾಣಿ ಸೆಂಟರ್ ನಾಯಕರಾದ ಸ್ವಾದಿಕ್ ಪೇರಮೊಗರು, ಸುಲೈಮಾನ್ ಸೂರಿಕುಮೇರು, ಯೂಸುಫ್ ಹಾಜಿ ಸೂರಿಕುಮೇರು,ಹಂಝ ಸೂರಿಕುಮೇರು,ಇಬ್ರಾಹಿಂ ಮುಸ್ಲಿಯಾರ್ ಮಾಣಿ,ಅಬ್ಬಾಸ್ ಮಾಣಿ,ಅಬ್ದುಲ್ ಫತ್ತಾಹ್ ಮಾಣಿ,ಇಸಾಕ್ ಮಾಣಿ,ಜಮಾಲ್ ಮಾಣಿ,ಮುಈನುದ್ದೀನ್ ಮಾಣಿ,ಮುನೀರ್ ಮಾಣಿ,ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

- Advertisement -

Related news

error: Content is protected !!