Saturday, May 18, 2024
spot_imgspot_img
spot_imgspot_img

ವಿಟ್ಲ ಪ. ಪಂ ನಾಮ ನಿರ್ದೇಶನದ ಸದಸ್ಯನಿಂದ ಕೂಜಪ್ಪಾಡಿ ಪರಿಸರದ ನಿವಾಸಿಗಳಿಗೆ ತಕರಾರು

- Advertisement -G L Acharya panikkar
- Advertisement -

ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ಇದ್ದರೂ ರಸ್ತೆ ಬಂದ್‌ ಮಾಡಲು ಹೊರಟ ಮೊಹಮ್ಮದ್‌ ಇಕ್ಬಾಲ್‌ ಎಂಬಾತನ ವಿರುದ್ಧ ನಿವಾಸಿಗಳ ಆಕ್ರೋಶ

This image has an empty alt attribute; its file name is VC_PUC_-1-819x1024.jpg
This image has an empty alt attribute; its file name is VC_PUC_-1-819x1024.jpg

ವಿಟ್ಲ ಕಸಬಾ ಗ್ರಾಮದ ಮಾರ್ಣಮಿಗುಡ್ಡೆ ಕೂಜಪ್ಪಾಡಿ ಎಂಬಲ್ಲಿನ ವಿಳಾಸದಲ್ಲಿ ವಾಸಿಸುವ ನಿವಾಸಿಗಳಿಗೆ ಜಾಗ ಕೊಟ್ಟ ಮಾಲೀಕ ಸಂಪರ್ಕ ರಸ್ತೆಯ ವಿಚಾರವಾಗಿ ತಕರಾರು ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಮಹಮ್ಮದ್‌ ಇಕ್ಬಾಲ್‌ ಎಂಬಾತನಿಂದ ಸುಮಾರು 18 ಕುಟುಂಬಗಳು ಜಾಗ ಖರೀದಿಸಿ ಅಲ್ಲಿ ಮನೆ ನಿರ್ಮಿಸಿ ಕಳೆದ 14 ವರ್ಷದಿಂದ ವಿಟ್ಲ ಕಸಬಾ ಗ್ರಾಮದ ಮಾರ್ಣಮಿಗುಡ್ಡೆ ಕೂಜಪ್ಪಾಡಿ ವಿಳಾಸದಲ್ಲಿ ವಾಸಿಸಿರುತ್ತಾರೆ.
ಖರೀದಿಸಿದ ಜಾಗದ ಪ್ರತಿಯಲ್ಲಿ ಸುಮಾರು ೧೨ ಅಡಿ ಅಗಲದ ನೀರಕಣಿಯಿಂದ ಕೋರೆ ರಸ್ತೆವರೆಗೆ ಸಂಪರ್ಕ ರಸ್ತೆ ಕಲ್ಪಿಸಲಾಗಿದೆ ಇದೆ ಎಂದು ದಾಖಲಾಗಿದೆ. ಆದರೆ ಸುಮಾರು ಒಂದು ವಾರಗಳಿಂದ ಮೊಹಮ್ಮದ್ ಇಕ್ಬಾಲ್ ಎಂಬಾತ ಈ ಪರಿಸರದ ಪ್ರಮುಖ ಸಂಪರ್ಕ ರಸ್ತೆಯನ್ನು ಬಂದ್‌ ಮಾಡಲು ಪ್ರಯತ್ನಿಸುತ್ತಿದ್ದು, ಈ ಬಗ್ಗೆ ಈ ವಠಾರದ ನಿವಾಸಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಜಪ್ಪಾಡಿಗೆ ಸಂಪರ್ಕ ಕಲ್ಪಿಸುವ ಈ ಮುಖ್ಯ ರಸ್ತೆಯು ಈ ಪರಿಸರದ ಎಲ್ಲಾ ನೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಈ ರಸ್ತೆಯ ಮೂಲಕ ಈ ವಠಾರದ ಮಕ್ಕಳು ಶಾಲೆಗೆ ತೆರಳುತ್ತಾರೆ. ಮತ್ತು ಈ ವಠಾರದ ಎಲ್ಲಾ ನಿವಾಸಿಗಳಿಗೆ ದೈನಂದಿನ ಕೆಲಸ ಕಾರ್ಯಗಳಿಗೆ ಹಾದುಹೋಗಲು ಈ ರಸ್ತೆ ಪ್ರಮುಖ ರಸ್ತೆಯಾಗಿ ಬೆಳೆದು ನಿಂತಿದೆ.

ಈ ಹಿಂದೆಯೇ ಮೊಹಮ್ಮದ್‌ ಇಕ್ಬಾಲ್‌ ಎಂಬಾತ ಈ ರಸ್ತೆಯನ್ನು ಬಂದ್‌ ಮಾಡುತ್ತೇನೆ ಎಂದು ಬಾಯಿ ಮಾತಿನಲ್ಲಿ ಹೇಳುತ್ತಿದ್ದ, ಮುಂದೊಂದು ದಿನ ಈ ಸಂಪರ್ಕ ರಸ್ತೆಯನ್ನು ಬಂದ್ ಮಾಡುವ ಸಾಧ್ಯತೆ ಇದೆ ಎಂದು ಎಚ್ಚೆತ್ತುಕೊಂಡ ಈ ಪರಿಸರದ ನಿವಾಸಿಗಳು ಮಂಗಳೂರು ಜಿಲ್ಲಾ ನ್ಯಾಯಾಲಯಕ್ಕೆ ತಡೆಯಾಜ್ಞೆಯನ್ನು ಹೂಡಿದ್ದರು. ಈ ಬಗ್ಗೆ ಮೊಹಮ್ಮದ್‌ ಇಕ್ಬಾಲ್‌ನ ವಿರುದ್ಧ ಸಂಪರ್ಕ ರಸ್ತೆಯನ್ನು ಬಂದ್‌ ಮಾಡದಂತೆ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆಯನ್ನು ನೀಡಿರುತ್ತದೆ.

ಈ ವಿಷಯವನ್ನು ಮೊಹಮ್ಮದ್ ಇಕ್ಬಾಲ್‌ನಲ್ಲಿ ಪರಿಸರದ ನಿವಾಸಿಗಳು ತಿಳಿಸಿದಾಗ ಇಂದು ಏಕಾಏಕಿಯಾಗಿ ಮೊಹಮ್ಮದ್ ಇಕ್ಬಾಲ್‌ ಮತ್ತು ಆತನ ಕುಟುಂಬಸ್ಥರು ಒಂದು ಪಿಕಪ್‌ ಕೆಂಪು ಕಲ್ಲಿನೊಂದಿಗೆ ಸ್ಥಳಕ್ಕೆ ಆಗಮಿಸಿ, ಕೂಜಪ್ಪಾಡಿ ಸಂಪರ್ಕ ರಸ್ತೆಗೆ ಅಡ್ಡಲಾಗಿ ಇಟ್ಟು ರಸ್ತೆ ಬಂದ್‌ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಮೊಹಮ್ಮದ್‌ ಇಕ್ಬಾಲ್‌ ಎಂಬಾತನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೂಜಪ್ಪಾಡಿ ಪರಿಸರದ ನಿವಾಸಿಗಳು ವಿಟ್ಲ ಪೊಲೀಸ್‌ ಠಾಣೆಗೆ ಮನವಿ ಸಲ್ಲಿಸಿದ್ದಾರೆ.

ಮೊಹಮ್ಮದ್‌ ಇಕ್ಬಾಲ್‌ ವಿಟ್ಲ ಪಟ್ಟಣ ಪಂಚಾಯತ್‌ನ ನಾಮ ನಿರ್ದೇಶನದ ಸದಸ್ಯನಾಗಿದ್ದು, ಈ ವಿಚಾರವಾಗಿ ಈ ಪರಿಸರದ ನಿವಾಸಿಗಳು ಶಾಸಕರ ಗಮನಕ್ಕೂ ತಿಳಿಸಿದ್ದಾರೆ. ಆದರೆ ಈ ಬಗ್ಗೆ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆಯನ್ನು ಪಡೆದಿದ್ದರೂ, ಪ್ರಭಾವಿ ರಾಜಕೀಯ ವ್ಯಕ್ತಿಗಳ ಕೈಚಳಕದಲ್ಲಿ ಮೆರುತ್ತಿದ್ದಾನೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಈ ಬಗ್ಗೆ ನನ್ನನ್ನು ನ್ಯಾಯಾಲಯ ಏನು ಮಾಡುತ್ತದೆ ಎಂದು ಪರಿಸರದ ನಿವಾಸಿಗಳಿಗೆ ಪ್ರಶ್ನಿಸಿ ಬೆದರಿಕೆಯೊಡ್ಡಿದ್ದಾನೆ ಎಂದು ಪರಿಸರದ ನಿವಾಸಿಗಳು ತಿಳಿಸಿರುತ್ತಾರೆ.

ಈ ಹಿಂದೆ ಇದೇ ಮೊಹಮ್ಮದ್ ಇಕ್ಬಾಲ್ ತನ್ನ ಮಾಲಕತ್ವದ ಬಸ್ ನ್ನು ಅನೇಕ ತಿಂಗಳು ಮೋಟಾರು ವಾಹನ ತೆರಿಗೆ ಕಟ್ಟದೆ ಓಡಿಸಿ RTO ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಕೂಡ ನಡೆದಿತ್ತು.

- Advertisement -

Related news

error: Content is protected !!