- Advertisement -
- Advertisement -
ನವದೆಹಲಿ: ಕೇರಳದ ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ನಿರ್ವಹಣೆ ಹಕ್ಕು ರಾಜಮನೆತನಕ್ಕೆ ಇದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೇವಸ್ಥಾನ ನಿರ್ಮಾಣ ಮಾಡಿದ ಟ್ರಾವಂಕೋರ್ ರಾಜ ಮನೆತನದವರಿಗೆ ಈಗಲೂ ಈ ದೇವಸ್ಥಾನದ ಮೇಲೆ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.
1991ರಲ್ಲಿ ಈ ಸಂಸ್ಥಾನದ ಕೊನೆಯ ರಾಜ ಮೃತಪಟ್ಟರೂ ಅವರ ಕುಟುಂಬಸ್ಥರಿಗೆ ದೇವಸ್ಥಾನದ ನಿರ್ವಹಣೆಯ ಹಕ್ಕಿದೆ. ಅವರ ಕುಟುಂಬಕ್ಕೆ ದೇವಸ್ಥಾನದ ಹಕ್ಕಿಗೆ ಯಾವುದೇ ಯಾವುದೇ ಚ್ಯುತಿ ಇಲ್ಲ. ಹಿಂದಿನ ಪದ್ಧತಿ ಅನುಸಾರಿ ದೇವಸ್ಥಾನದ ನಿರ್ವಹಣೆ ಮುಂದುವರಿಯಲಿದೆ ಎಂದು ಸುಪ್ರೀಂ ತಿಳಿಸಿದೆ.
ದೇವಸ್ಥಾನದ ಆಡಳಿತದಲ್ಲಿ ಹಣಕಾಸು ಅವ್ಯವಹಾರಗಳು ನಡೆದಿವೆ ಎಂಬ ಆರೋಪ ವರ್ಷಗಳ ಹಿಂದೆ ಕೇಳಿಬಂದಿದ್ದವು. 9 ವರ್ಷಗಳಿಂದಲೂ ದೇವಸ್ಥಾನದ ನಿರ್ವಹಣೆ ಹಕ್ಕಿನ ವಿಚಾರವಾಗಿ ಗೊಂದಲ ಏರ್ಪಟ್ಟಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಈ ನಿರ್ಧಾರ ತೆಗೆದುಕೊಂಡಿದೆ.
- Advertisement -