Sunday, June 7, 2026
spot_imgspot_img
spot_imgspot_img

ಪಡುಬಿದ್ರೆ: ಸಾಲದ ವಿಚಾರಕ್ಕೆ ಯಕ್ಷಗಾನ ಕಲಾವಿದನಿಗೆ ಹಲ್ಲೆ; ಪ್ರಕರಣ ದಾಖಲು..!

- Advertisement -
- Advertisement -

ಪಡುಬಿದ್ರಿ: ಸಾಲದ ವಿಚಾರಕ್ಕೆ ಯಕ್ಷಗಾನ ಕಲಾವಿದನ ಮೇಲೆ ಮೂವರು ಕಂಬಳದ ಕೋಣಗಳ ಹೊಡೆಯಲು ಬಳಸುವ ಬಾರುಕೋಲಿನ ಹಲ್ಲೆ ಮಾಡಿದ ಘಟನೆ ನಡೆದಿದ್ದು, ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಯಕ್ಷಗಾನ ಕಲಾವಿದ ಪಡುಬಿದ್ರಿ ನಿವಾಸಿ, ಸಸಿಹಿತ್ಲು ಮೇಳದ ನಿತಿನ್ ಕುಮಾರ್ ಹಾಗೂ ಹಲ್ಲೆ ನಡೆಸಿದ ಆರೋಪಿಗಳನ್ನು ಸಚಿನ್ ಅಮೀನ್ ಉದ್ಯಾವರ, ಆತನ ತಂದೆ ಕುಶಾಲಣ್ಣ ಹಾಗೂ ಇನ್ನೋರ್ವ ಫೈನಾನ್ಶಿಯರ್ ಎಂದು ಗುರುತಿಸಲಾಗಿದೆ.

ಹಲ್ಲೆಗೊಗಾದ ನಿತಿನ್ ಮತ್ತು ಆರೋಪಿ ಸಚಿನ್ ಇಬ್ಬರೂ ಗೆಳೆಯರಾಗಿದ್ದು, ಯಕ್ಷಗಾನ ಕಲಾವಿದರಾಗಿದ್ದಾರೆ. ಪಾವಂಜೆ ಮೇಳದ ಯಕ್ಷ ಕಲಾವಿದನಾಗಿದ್ದ ಆರೋಪಿ ಸಚಿನ್ ನಿತಿನ್ ಅವರು ಪಡೆದ ಸಾಲ ಹಿಂದಿರುಗಿಸಿಲ್ಲ ಎಂದು ಆತನ ತಂದೆ ಕುಶಾಲಣ್ಣ ಹಾಗೂ ಇನ್ನೋರ್ವ ಫೈನಾನ್ಶಿಯರ್ ಸೇರಿ ಉದ್ಯಾವರದ ಮನೆಯೊಂದರಲ್ಲಿ ಜ. 21ರಂದು ಕಂಬಳದ ಕೋಣಗಳ ಬಾರುಕೋಲಿನ ಮೂಲಕ ಹಲ್ಲೆ ನಡೆಸಿದ್ದಾರೆ.

ಮೂವರು ಸೇರಿ ಬಾರುಕೋಲಿನಿಂದ ನಿತಿನ್ ಅವರ ಬೆನ್ನಿಗೆ, ತಲೆಗೆ, ಕಾಲಿಗೆ ಹೊಡೆದಿದ್ದಾರೆ. ಕಾಲಿನಿಂದ ತುಳಿದು ಕೈಯಿಂದ ಕೆನ್ನೆಗೆ ಹೊಡೆದು ಖಾಲಿ ಬಾಂಡ್ ಪೇಪರ್ ಮೇಲೆ ಬಲಾತ್ಕಾರವಾಗಿ ಸಹಿ ಮಾಡಿಸಿಕೊಂಡಿದ್ದಾರೆ ಎಂದು ದೂರಲಾಗಿದೆ.

ಬಳಿಕ ಸಂಜೆ ವಾಪಸ್ಸು ಪಡುಬಿದ್ರಿಗೆ ಮೂವರು ಆರೋಪಿಗಳೇ ಕಳುಹಿಸಿಕೊಟ್ಟಿದ್ದಾರೆ. ಜ. 21ರ ರಾತ್ರಿ ವೇಳೆ ಪುತ್ತೂರಿನಲ್ಲಿ ನಡೆದ ಯಕ್ಷಗಾನಕ್ಕೆ ಪಾಲ್ಗೊಂಡಿದ್ದ ನಿತಿನ್, ಜ. 22ರಂದು ನೋವು ಜಾಸ್ತಿಯಾಗಿದ್ದರಿಂದ ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರುಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!