Saturday, May 18, 2024
spot_imgspot_img
spot_imgspot_img

ಪಡುಬಿದ್ರಿ: ನಕಲಿ ಚಿನ್ನ ಅಡವಿಟ್ಟು ವಂಚನೆ ಪ್ರಕರಣ; ನಾಲ್ವರು ಅರೆಸ್ಟ್..!

- Advertisement -G L Acharya panikkar
- Advertisement -

ಪಡುಬಿದ್ರಿ: ಪಡುಬಿದ್ರಿ ಕಂಚಿನಡ್ಕ ನಿವಾಸಿ, ಕೇರಳ ಮೂಲದ ಆರೋಪಿ ರಾಜೀವ್ 30ಗ್ರಾಂ ಗೋಲ್ಡ್ ನ ಚಿನ್ನಾಭರಣಗಳನ್ನು ಸ್ಥಳೀಯ ಬ್ಯಾಂಕು, ಸೊಸೈಟಿಗಳಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ. ಈ ಪ್ರಕರಣವನ್ನು ಬೇಧಿಸಿರುವ ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಹಾಗೂ ಸಿಬ್ಬಂದಿಗಳು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರಾಜೀವ್‌ನಿಗೆ ಸಹಕರಿಸಿದ ಆರೋಪಿಗಳಾದ ಕುಮುಟಾದ ನಿತಿಲ್ ಭಾಸ್ಕರ್ ಶೇಟ್(35), ಸಂಜಯ್ ಶೇಟ್(42) ಮತ್ತು ಸಂತೋಷ್ ಶೇಟ್(39) ಹಾಗೂ ಬೆಳಗಾವಿಯ ಕೈಲಾಸ್ ಗೋರಾಡ(26) ಎಂದು ಗುರುತಿಸಲಾಗಿದೆ.

ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಅವರನ್ನು ಒಪ್ಪಿಸಿದೆ. ಜೊತೆಗೆ ಪೊಲೀಸರು ಆರೋಪಿಗಳಿಂದ ನಕಲಿ 916 ಹಾಲ್‌ಮಾರ್ಕ್ ಸೀಲ್ ಹಾಕಲು ಬಳಸಲಾಗುತ್ತಿದ್ದ ಸುಮಾರು 3.5 ಲಕ್ಷ ರೂ. ಮೌಲ್ಯದ ಮೆಷಿನ್ ಕಂಪ್ಯೂಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ರಾಜೀವ್, ಸಿನಿಮಾ ಕತೆಯಲ್ಲಿ ಇದ್ದಂತೆ 30 ಗ್ರಾಂ ಗೋಲ್ಡ್ ಬಳಸಿ 20 ಗ್ರಾಂ ಚಿನ್ನಾಭರಣದೊಂದಿಗೆ ಗಲ್ಫ್ ರಾಷ್ಟ್ರಕ್ಕೆ ತೆರಳುವ ಹಾಗೂ ಅಲ್ಲಿಂದ ಬರುವ ವೇಳೆ 20 ಗ್ರಾಂ ಶುದ್ಧ ಚಿನ್ನಾಭರಣವನ್ನು ಧರಿಸಿ ಬರುವ ಉಪಾಯಕ್ಕೆ ಆರೋಪಿ ನಿತಿಲ್ ಭಾಸ್ಕರ್ ಶೇಟ್‌ ಸಹಕರಿಸುತ್ತಿದ್ದ. ಜೊತೆಗೆ ಇನ್ನಿಬ್ಬರು ಆರೋಪಿಗಳು ನಕಲಿ ಚಿನ್ನಾಭರಣಗಳನ್ನು ತಯಾರಿಸಿ ಬೆಳಗಾವಿಯಲ್ಲಿ ನಕಲಿ ಹಾಲ್‌ಮಾರ್ಕ್ ಮೊಹರನ್ನು ಹಾಕುತ್ತಿದ್ದರು. ಬಳಿಕ ಆರೋಪಿ ರಾಜೀವ್ ತನ್ನ ಉಪಾಯವನ್ನೇ ಬದಲಾಯಿಸಿದ್ದಾನೆ. ಇದೀಗ ಸ್ಥಳೀಯ ವಿತ್ತೀಯ ಸಂಸ್ಥೆಗಳಿಗೆ ವಂಚಿಸಲು ಪ್ರಾರಂಭಿಸಿದ ಆರೋಪಿ ರಾಜೀವ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು ಇವರು ತಯಾರಿಸುತ್ತಿದ್ದ ನಕಲಿ ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸುವ ಯಾವುದೇ ವಿಧಾನಗಳಲ್ಲೂ ನಕಲಿ ಎಂದು ಪತ್ತೆಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನಲೆ ಬ್ಯಾಂಕು, ಸೊಸೈಟಿಗಳು ಚಿನ್ನಭರಣ ಅಡವಿಟ್ಟು ಸಾಲ ಪಡೆಯುತ್ತಿದ್ದ. ಸಾಲವನ್ನಿತ್ತು ಮರಳಿ ಬಾರದೇ ಇದ್ದಾಗ ಏಲಂ ಪ್ರಕ್ರಿಯೆ ನಡೆಸಲಾಗಿತ್ತು. ಈ ವೇಳೆ ಉಡುಪಿಯ ಬಿಡ್ಡುದಾರರೊಬ್ಬರು ಚಿನ್ನವನ್ನು ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಹಾಗೂ ಆತನ ಪತ್ನಿ ಪಡುಬಿದ್ರಿಯಲ್ಲಿನ ಇಂಡಸ್ಟ್ರಿಯಲ್ ಬ್ಯಾಂಕ್‌ನ ಪಡುಬಿದ್ರಿ ಶಾಖೆಯಲ್ಲಿ 2022 ಸೆ. 1 ರಿಂದ ಫೆ. 26 ,2024 ರವರೆಗೆ 180 ಗ್ರಾಂ ನಕಲಿ ಚಿನ್ನ ಅಡವಿಟ್ಟು 8.08 ಲಕ್ಷ ಪಡೆದಿದ್ದಾರೆ.

ರಾಜೀವ್ ದಂಪತಿ ಸಹಕಾರಿ ಸಂಘವೊಂದರ ಸಿಟಿ ಶಾಖೆಯಿಂದ ಸುಮಾರು 2 ವರ್ಷಗಳ ಅವಧಿಯಲ್ಲಿ 231 ಗ್ರಾಂ ಹಾಗೂ 188 ಗ್ರಾಂ ನಕಲಿ ಚಿನ್ನವನ್ನು ಅಡವಿಟ್ಟು 19 ಲಕ್ಷ ರೂ. ಸಾಲವಾಗಿ ಪಡೆದಿದ್ದಾರೆ. ಉಚ್ಚಿಲದ ಸಹಕಾರಿ ಬ್ಯಾಂಕ್ ಶಾಖೆಯೊಂದರಿಂದ ಮಾರ್ಚ್ 2023 ರಿಂದ ಫೆ. 26, 2024 ರ ಅವಧಿಯಲ್ಲಿ 72 ಗ್ರಾಂ ಚಿನ್ನ ಅಡವಿಟ್ಟು 2.86 ಲಕ್ಷ ರೂ. ಗಳ ಸಹಿತ ಒಟ್ಟು 29.94 ಲಕ್ಷ ರೂ. ಪಡೆದಿದ್ದರು.

- Advertisement -

Related news

error: Content is protected !!