Saturday, May 11, 2024
spot_imgspot_img
spot_imgspot_img

ಬಾಲಿವುಡ್‌ ಸಿನಿಮಾ ಲೋಕಕ್ಕೆ ಕಾಲಿಟ್ರಾ ಪಾಕ್‌ ಬೆಡಗಿ ಸೀಮಾ..!?; ಕುತೂಹಲ ಕೆರಳಿಸಿದ ಬಾಲಿವುಡ್‌ ನಿರ್ದೇಶಕನ ಭೇಟಿ

- Advertisement -G L Acharya panikkar
- Advertisement -
vtv vitla

ಪಬ್​ಜಿ​ ಪ್ರೇಮಿಗಾಗಿ ಪಾಕಿಸ್ತಾನದಿಂದ ಗಡಿ ದಾಟಿ ಬಂದ ಸೀಮಾಳನ್ನು ಬಾಲಿವುಡ್‌ ನಿರ್ದೇಶಕರು ಭೇಟಿ ಮಾಡಿದ್ದು, ತಮ್ಮ ಸಿನಿಮಾದಲ್ಲಿ ಅಭಿನಯಿಸುವಂತೆ ಕೇಳಿ ಕೊಂಡಿದ್ದಾರೆ.ಪಾಕಿಸ್ತಾನದಿಂದ ಅಕ್ರಮವಾಗಿ ಬಂದ ಸೀಮಾ ಹೈದರ್ ಹಾಗೂ ಆಕೆಯ ಪ್ರೇಮಿ ಸಚಿನ್ ಮೇಲೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ತನಿಖೆ ನಡೆಸುತ್ತಿದೆ. ಎಟಿಎಸ್ ವಿಚಾರಣೆಯ ವರದಿ ಬಂದ ಬಳಿಕ ಸೀಮಾ ಹೈದರ್ ಬಾಲಿವುಡ್ ಸಿನಿಮಾದಲ್ಲಿ ಆ್ಯಕ್ಟಿಂಗ್ ಮಾಡಲಿದ್ದಾರೆ.

ಸೀಮಾ ಹೈದರ್‌ಗೆ ಸಿನಿಮಾದಲ್ಲಿ ಅಭಿನಯಿಸಲು ಈ ಆಫರ್‌ ಕೊಟ್ಟಿರೋದು ಬಾಲಿವುಡ್‌ನ್ ಜಾನಿ ಪ್ರೊಡಕ್ಷನ್‌ ಹೌಸ್. ಬಾಲಿವುಡ್ ನಿರ್ದೇಶಕ ಜಯಂತ್ ಸಿಂಗ್, ಭರತ್ ಸಿಂಗ್‌ ಅವರು ಸಚಿನ್ ಹಾಗೂ ಸೀಮಾ ನೆಲೆಸಿರುವ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಾವು ಎ ಟೈಲರ್ ಮರ್ಡರ್ ಮಿಸ್ಟ್ರಿ ಅನ್ನೋ ಹೆಸರಿನ‌ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಅದರಲ್ಲಿ ಭಾರತದ ರಾ ಏಜೆಂಟ್ ಪಾತ್ರ ನಿರ್ವಹಿಸುವಂತೆ ಸೀಮಾ ಹೈದರ್ ಅವರನ್ನು ಕೋರಲಾಗಿದೆ. ಈ ಖುಷಿಯಲ್ಲಿ ನಿರ್ದೇಶಕರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರುವ ಸೀಮಾ ಹೈದರ್ ಧನ್ಯವಾದ ತಿಳಿಸಿದ್ದಾರೆ. ನಿರ್ದೇಶಕ, ನಿರ್ಮಾಪಕರ ಆಫರ್‌ ಅನ್ನು ಸೀಮಾ ಹೈದರ್ ಸಂತಸವಾಗಿಯೇ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಎ ಟೈಲರ್ ಮರ್ಡರ್ ಮಿಸ್ಟ್ರಿ ಕಥೆಯೇನು?
2022 ಜೂನ್ 28ರಂದು ರಾಜಸ್ಥಾನದ ಉದಯಪುರ್‌ನಲ್ಲಿ ಟೈಲರ್ ಕನ್ನಯ್ಯ ಲಾಲ್‌ ಅನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇಬ್ಬರು ಮುಸ್ಲಿಂ ವ್ಯಕ್ತಿಗಳು ಟೈಲರ್ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದರು. ಉದಯಪುರ್‌ನಲ್ಲಿ ಹತ್ಯೆಯಾದ ಟೈಲರ್‌ ಕನ್ನಯ್ಯ ಲಾಲ್ ಪ್ರಕರಣ ಸಂಬಂಧ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ. ಎ ಟೈಲರ್ ಮರ್ಡರ್ ಮಿಸ್ಟ್ರಿ ಅನ್ನೋ ಈ ಸಿನಿಮಾದಲ್ಲಿ ಭಾರತದ ರಾ ಏಜೆಂಟ್ ಪಾತ್ರ ನಿರ್ವಹಿಸುವಂತೆ ಸೀಮಾ ಹೈದರ್ ಅವರನ್ನು ಕೇಳಲಾಗಿದೆ.

ಎ ಟೈಲರ್ ಮರ್ಡರ್ ಮಿಸ್ಟ್ರಿ ಸಿನಿಮಾ ನಿರ್ಮಾಪಕರು ಸೀಮಾ ಹೈದರ್‌ ಅನ್ನು ಭೇಟಿ ಮಾಡಿದ್ದರು. ಈ ವೇಳೆ ಹಿಂದೂ ಧರ್ಮ ಸ್ವೀಕರಿಸಿರುವ ಸೀಮಾ ಹೈದರ್‌ಗೆ ಕೇಸರಿ ಶಾಲು ಹೊದಿಸಿ ಸನ್ಮಾನ ಮಾಡಲಾಗಿದೆ. ಈ ವೇಳೆ ಸಿನಿಮಾ ನಿರ್ಮಾಪಕ ಅಮಿತ್ ಕಾಲಿಗೆ ಬಿದ್ದ ಸೀಮಾ ಹೈದರ್ ಆಶೀರ್ವಾದ ಪಡೆದಿದ್ದಾರೆ. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಗ್ರೀನ್‌ ಸಿಗ್ನಲ್ ಕೊಡುತ್ತಿದ್ದಂತೆ ಸೀಮಾ ಹೈದರ್ ಬಾಲಿವುಡ್ ಸಿನಿಮಾದಲ್ಲಿ ಆ್ಯಕ್ಟಿಂಗ್ ಮಾಡಲಿದ್ದಾರೆ ಎನ್ನಲಾಗಿದೆ. ಸೀಮಾ ಹೈದರ್‌ಗೆ ಬಾಲಿವುಡ್ ಆಫರ್ ಸಿಕ್ರೆ, ಸೀಮಾ ಪತಿ ಸಚಿನ್‌ಗೆ ಗುಜರಾತ್ ಉದ್ಯಮಿಯೊಬ್ಬರು ಉದ್ಯೋಗದ ಆಫರ್ ಕೊಟ್ಟಿದ್ದಾರೆ. ತಿಂಗಳಿಗೆ 50 ಸಾವಿರ ರೂಪಾಯಿ ವೇತನದ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.

Insta: glacharyajewellers
Fb: glacharya
- Advertisement -

Related news

error: Content is protected !!