Saturday, July 5, 2025
spot_imgspot_img
spot_imgspot_img

ಪಾಕ್‌ ಕ್ರಿಕೆಟ್ ತಂಡದ ನಾಯಕನ ಕೈಯಲ್ಲಿ ಗನ್‌..! ಯಾಕೆ ಗೊತ್ತಾ..?

- Advertisement -
- Advertisement -

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಗನ್ ಹಿಡಿದ ಫೋಟೋ ವೈರಲ್ ಆಗಿದ್ದು, ಇದು ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂಬ ಟೀಕೆಗಳು ವ್ಯಕ್ತವಾಗಿದೆ. ಬಾಬರ್ ಆಜಮ್ ವಿಡಿಯೋ ಗೇಮ್‌ಗಾಗಿ ಗನ್ ಹಿಡಿದು ಪೋಸ್ ನೀಡಿದ್ದು ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

ಗರೇನಾ ಫ್ರೀ ಫೈಯರ್ ಪಾಕಿಸ್ತಾನ್ ಜೊತೆಗೆ ತಮ್ಮ ಸಹಯೋಗವನ್ನು ತೋರಿಸುವ ಉದ್ದೇಶದಿಂದ ಕೈಯಲ್ಲಿ ಗನ್ ಹಿಡಿದು ಫೋಟೋಗೆ ಪೋಸ್ ನೀಡಿದ್ದರಲ್ಲದೇ, ವಿಶ್ವದ ಅತೀ ಹೆಚ್ಚು ಡೌನ್‌ಲೋಡ್ ಆದ ಬ್ಯಾಟಲ್ ರಾಯಲ್ ಗೇಮ್ ಬಗ್ಗೆ ತಿಳಿದುಕೊಳ್ಳಲು ಟ್ಯೂನ್ ಮಾಡಿ ಎಂದು ಬಾಬರ್ ಕೋರಿಕೊಂಡಿದ್ದರು. ಆದರೆ ಫೋಟೋ ಅವರ ಅಭಿಮಾನಿಗಳಿಗೆ ಇಷ್ಟವಾಗಿಲ್ಲ.

ನೀವು ಈ ಆಟದ ಬಗ್ಗೆ ಉತ್ತಮ ಚಿತ್ರದ ಮೂಲಕ ಜಾಹೀರಾತು ಮಾಡಿ ಪ್ರಚಾರ ಮಾಡಬಹುದಿತ್ತು, ನೀವು ಜವಾಬ್ದಾರಿಯುತವಾಗಿ ಇರಬೇಕಾಗುತ್ತದೆ ಎಂದು ನೆಟ್ಟಿಗರು ಈ ಫೋಟೋಗೆ ಪ್ರತಿಕ್ರಿಯೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಬರ್‌ ಆಜಂ ನೀವು ನಮ್ಮ‌ನಾಯಕ, ನಿಮ್ಮ‌ಕೈಯಲ್ಲಿ ಗನ್ ಇರಬಾರದು. ಕ್ರಿಕೆಟ್ ಶಾಂತಿಯ ಸಂಕೇತ.‌ ಮಕ್ಕಳೂ ನಿಮ್ಮನ್ನು ನೋಡುತ್ತಾರೆ. ಈ ಚಿತ್ರ ನೋಡಿ ಆಘಾತವಾಗಿದೆ, ರೋಲ್ ಮಾಡೆಲ್ ಬಂದೂಕು ಹಿಡಿದು ಹಿಂಸೆಗೆ ಪ್ರಚೋದಿಸುತ್ತಿದ್ದಾರೆಯೇ ಎಂಬಿತ್ಯಾದಿ ಟೀಕೆಯೂ ವ್ಯಕ್ತವಾಗಿದೆ.

- Advertisement -

Related news

error: Content is protected !!