Thursday, April 25, 2024
spot_imgspot_img
spot_imgspot_img

ಗ್ರಾಮ ಪಂಚಾಯಿತಿ ಚುನಾವಣೆಗೆ ಭಿಕ್ಷುಕನನ್ನು ನಿಲ್ಲಿಸಿದ ಗ್ರಾಮಸ್ಥರು!

- Advertisement -G L Acharya panikkar
- Advertisement -

ಮೈಸೂರು: ನಂಜನಗೂಡಿನ ಬೊಕ್ಕಹಳ್ಳಿಯಲ್ಲಿ ಭಿಕ್ಷುಕರೊಬ್ಬರು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದಾರೆ. 40 ವರ್ಷದ ಅಂಕ ನಾಯಕ ಎಂಬವರು ಬೊಕ್ಕಹಳ್ಳಿ ಆಸುಪಾಸಿನಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಇದೀಗ ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಅಂಗವಿಕಲರಾಗಿರುವ ಅಂಕ ನಾಯಕರು ಊರಿನಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಊರಿನ ಯುವಕರು ಕೂಡ ಇವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಗ್ರಾಮಪಂಚಾಯತ್ ಚುನಾವಣೆಯ ಬರುತ್ತಿದ್ದಂತೆಯೇ ಇಲ್ಲಿನ ಯುವಕರೆಲ್ಲರೂ ಸೇರಿ ಅಂಕ ನಾಯಕರನ್ನು ಗ್ರಾಮ ಪಂಚಾಯತ್ ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲಿಸಿದ್ದಾರೆ.

ಅಂಬೇಡ್ಕರ್ ಅವರ ಸಂವಿಧಾನದ ಶಕ್ತಿಯೇ ಇದಾಗಿದೆ. ಒಬ್ಬ ಭಿಕ್ಷುಕ ಕೂಡ ಚುನಾವಣೆಗೆ ಸ್ಪರ್ಧಿಸುವ ಅವಕಾಶವಿರುವ ಪ್ರಪಂಚದ ಏಕೈಕ ದೇಶ ಭಾರತವಾಗಿದೆ. ಸಂವಿಧಾನದ ಶಕ್ತಿ ತಿಳಿಯದ ಕೆಲವರು ಅದರ ವಿರುದ್ಧ ನಾಲಗೆ ಹರಿಬಿಡುವುದು ಸಾಮಾನ್ಯವಾಗಿದೆ. ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಅವರು ಇಂದು ದೇಶದ ಪ್ರಧಾನಿಯಾಗಿದ್ದಾರೆ. ಇವೆಲ್ಲದಕ್ಕೂ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ. ಕೆಲವು ವಿಚಾರಗಳೇ ಹಾಗೆ ನಮ್ಮ ಜೊತೆಗೆ ಅದು ಇರುವ ವರೆಗೂ ಅದರ ಬೆಲೆ ನಮಗೆ ಗೊತ್ತಿರುವುದಿಲ್ಲ. ಭಾರತದ ಸಂವಿಧಾನವೂ ಹಾಗೆಯೇ ಆಗಿದೆ.

ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ಭಾರತದ ಸಂವಿಧಾನ ನಿಜಕ್ಕೂ ಗ್ರೇಟ್ ಅಲ್ಲವೇ? ಮುಂದೆ ಅವರು ಚುನಾವಣೆಯಲ್ಲಿ ಗೆದ್ದರೆ, ಯಾವ ಊರಿನಲ್ಲಿ ಭಿಕ್ಷೆ ಬೇಡುತ್ತಿದ್ದರೋ ಅದೇ ಊರಿನಲ್ಲಿ ಅವರು ಅಧಿಕಾರ ಪಡೆದು, ಆಡಳಿತ ನಡೆಸಲಿದ್ದಾರೆ.

- Advertisement -

Related news

error: Content is protected !!