Sunday, June 29, 2025
spot_imgspot_img
spot_imgspot_img

ಡ್ಯಾನ್ಸ್‌ ಕ್ಲಾಸ್‌ಗೆ ಹೋಗಬೇಡ ಎಂದ ಪೋಷಕರು; ಮನನೊಂದು ಯುವತಿ ಆತ್ಮಹತ್ಯೆ..!

- Advertisement -
- Advertisement -

ಪೋಷಕರು ಡ್ಯಾನ್ಸ್‌ ಕ್ಲಾಸ್‌ಗೆ ಹೋಗಬೇಡ ಎಂದಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮದಲ್ಲಿ ನಡೆದಿದೆ.

ಚಿನ್ನಕೋಟೆ ಗ್ರಾಮದ ಕೀರ್ತನಾ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆಗೆ ಇತ್ತೀಚೆಗೆ ಡಾನ್ಸ್‌ಗೆ ಹೋಗಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದ್ದಾರೆ. ಈ ಹಿನ್ನೆಲೆ ಕೀರ್ತನಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಡಾನ್ಸ್ ಎಂದರೆ ತುಂಬಾ ಇಷ್ಟಪಡುತ್ತಿದ್ದ ಕೀರ್ತನಾ‌ ಡಾನ್ಸ್‌ ಕ್ಲಾಸ್‌ಗೆ ಹೋಗಬೇಡ ಎಂದು ಹೇಳಿದ ಪೋಷಕರ ಮಾತಿನಿಂದ ಮನನೊಂದು ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!