Monday, May 13, 2024
spot_imgspot_img
spot_imgspot_img

ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣ : ಬಂಧಿತ ನಾಲ್ವರು 7 ದಿನ ಪೊಲೀಸ್ ವಶಕ್ಕೆ

- Advertisement -G L Acharya panikkar
- Advertisement -

ಸಂಸತ್‌ನಲ್ಲಿ ಬುಧವಾರ ಸಂಭವಿಸಿದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ನಾಲ್ವರು ಆರೋಪಿಗಳನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಲೋಕಸಭೆಯೊಳಗೆ ಬಂಧಿತರಾದ ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್, ಸಂಸತ್ತಿನ ಹೊರಗೆ ಬಂಧಿತರಾದ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಅವರನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ಪೊಲೀಸರು ನ್ಯಾಯಾಲಯದ ಮುಂದೆ ವಾದಿಸಿದ್ದು. ವಾದ ಪುರಸ್ಕರಿಸಿದ ನ್ಯಾಯಾಲಯ ಪೊಲೀಸರ ಕಸ್ಟಡಿಗೆ ನೀಡಿದೆ.

ಘಟನೆಯು ಭಯೋತ್ಪಾದಕ ದಾಳಿಯನ್ನು ಹೋಲುತ್ತದೆ. ಇದರ ಹಿಂದಿನ ಉದ್ದೇಶ ಹೊರಗೆಳೆಯಬೇಕಿದೆ. ಕೃತ್ಯದ ಉದ್ದೇಶ ಆರೋಪಿಗಳ ವೈಯುಕ್ತಿಕ ಉದ್ದೇಶ ಈಡೇರಿಸುವುದು ಮಾತ್ರ ಆಗಿದೆಯೇ? ಅಥವಾ ಇದರ ಹಿಂದೆ ಯಾವುದಾದರು ಸಂಘಟನೆಯ ಕೈವಾಡ ಇದೆಯಾ? ಎಂಬುವುದನ್ನು ತನಿಖೆ ನಡೆಸಬೇಕಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆರೋಪಿಗಳು ಶೂ ಅಡಿಯಲಿಟ್ಟು ಕಲರ್ ಸ್ಮೋಕ್ ಬಾಟಲಿ ಸಂಸತ್ ಒಳಗೆ ತಂದಿದ್ದಾರೆ. ಇಬ್ಬರು ಆರೋಪಿಗಳು ಲಕ್ನೋದಿಂದ ಶೂ ಖರೀದಿಸಿದ್ದರು. ಮುಂಬೈನಿಂದ ಕಲರ್ ಸ್ಮೋಕ್ ತಂದಿದ್ದರು. ಆರೋಪಿಗಳು ಕೆಲ ಕರ ಪತ್ರ ಹೊಂದಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಾರೆ.
ಬಂಧಿತರ ವಿರುದ್ಧ ಕಠಿಣವಾದ ಭಯೋತ್ಪಾದನಾ ನಿಗ್ರಹ ಪ್ರಕರಣ ದಾಖಲಿಸಲಾಗಿದೆ .

- Advertisement -

Related news

error: Content is protected !!