Thursday, July 4, 2024
spot_imgspot_img
spot_imgspot_img

ಪುತ್ತೂರು: (ಜುಲೈ 9) ಅಡಿಕೆ ಖರೀದಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಪತ್ರಿಕಾಗೋಷ್ಠಿ

- Advertisement -G L Acharya panikkar
- Advertisement -

ಉದ್ಘಾಟನೆ ಸಂದರ್ಭ ಅಡಿಕೆ ಖರೀದಿಯಲ್ಲಿ ವಿಶೇಷ ಆಫರ್‌: ಕೆ ಸೀತಾರಾಮ ರೈ ಸವಣೂರು

ಪುತ್ತೂರು: ಮಂಗಳೂರು ಕೃಷಿಕರ ಸಹಕಾರಿ ಸಂಘ ಮಂಗಳೂರು ಇವರಿಂದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಸಹಕಾರ ರತ್ನ ಡಾ| ಎಂ ಎನ್ ರಾಜೇಂದ್ರ ಕುಮಾರ್ ಇವರ ಸಹಕಾರದೊಂದಿಗೆ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಅಡಿಕೆ ಖರೀದಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಜುಲೈ 9 ರಂದು ನಡೆಯಲಿದ್ದು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾಸ್ ಲಿಮಿಟೆಡ್ ನ ಅಧ್ಯಕ್ಷ ಕೆ ಸೀತಾರಾಮ ರೈ ಸವಣೂರು ಮಾತನಾಡಿ ಶಾಸಕ ಅಶೋಕ್ ಕುಮಾರ್ ರೈ ಅವರು ಅಡಿಕೆ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಗೊಟ್ಟು ಮತ್ತು ಎಸ್ ಬಿ ಜಯರಾಮ ರೈ ಮತ್ತು ಅರಿಯಡ್ಕ ಗ್ರಾ.ಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಡಿಕೆ ಖರೀದಿ ಕೇಂದ್ರ ಉದ್ಘಾಟನೆಯ ದಿನ ಮಾರುಕಟ್ಟೆ ದರಕ್ಕಿಂತ ಅಡಿಕೆ ಖರೀದಿಯಲ್ಲಿ ರೂ.2 ಹೆಚ್ಚಳ ನೀಡಲಾಗುವುದು. ಖರೀದಿ ಮಾಡಿದ ಹೆಚ್ಚು ಅಡಿಕೆಗಳನ್ನು ಸಂಸ್ಕರಣೆ ಮಾಡುವ ಬಗ್ಗೆ ಈಗಾಗಲೇ ಇರುವ ನಮ್ಮ ಸುಳ್ಯ ಶಾಖೆಯಲ್ಲಿ ಎಪಿಎಂಸಿ ಯವರಿಂದ ಒಂದು ಹೆಚ್ಚುವರಿ ಗೋದಾಮು ಪಡೆದು ಒಂದು ಸುಸಜ್ಜಿತ ಅಡಿಕೆ ಸಂಸ್ಕರಣೆ ವಿಭಾಗ ಅತಿ ಶೀಘ್ರದಲ್ಲಿ ಪ್ರಾರಂಭಿಸಲಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಕಾವು ಸಿ ಎ ಬ್ಯಾಂಕ್ ಅಧ್ಯಕ್ಷ ನನ್ನ ಅಚ್ಚುತ ಮಾಡೆತ್ತಾಯ, ಮಾಸ್ ಸಂಸ್ಥೆಯ ನಿರ್ದೇಶಕ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಿ ಮಹಾಬಲೇಶ್ವರ ಭಟ್, ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ ಎಂ ಲೋಕೇಶ್ ಉಪಸ್ಥಿತರಿದ್ದರು.

- Advertisement -

Related news

error: Content is protected !!