Tuesday, May 14, 2024
spot_imgspot_img
spot_imgspot_img

ಜುಲೈವೊಳಗೆ ಪೌರತ್ವ ತಿದ್ದುಪಡಿ ಕಾಯ್ದೆ ನಿಯಮಗಳು ಸಿದ್ಧವಾಗಲಿವೆ: ಕೇಂದ್ರ ಸರ್ಕಾರ

- Advertisement -G L Acharya panikkar
- Advertisement -

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ(CAA) ನಿಯಮಗಳ ರಚನೆ ಪ್ರಗತಿಯಲ್ಲಿದ್ದು, ಜುಲೈ ಒಳಗೆ ಪೂರ್ಣಗೊಳಿಸುವುದಾಗಿ ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

CAA ಜಾರಿ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವಾಲಯದ ರಾಜ್ಯ ಸಚಿವ ನಿತ್ಯಾನಂದ್ ರೈ, 2019ರ ಪೌರತ್ವ ತಿದ್ದುಪಡಿ)ಕಾಯ್ದೆ, ಜನವರಿ 10, 2020ರಿಂದ ಜಾರಿಗೆ ಬಂದಿದೆ. ಕಾಯ್ದೆಯ ನಿಯಮಗಳ ರಚನೆ ಪ್ರಗತಿಯಲ್ಲಿದೆ. ಈ ನಿಯಮಗಳನ್ನು ರೂಪಿಸಲು ಅಧೀನ ಶಾಸನ, ಲೋಕಸಭೆ ಮತ್ತು ರಾಜ್ಯಸಭೆಯ ಸಮಿತಿಗಳು ಕ್ರಮವಾಗಿ 2021ರ ಜುಲೈ 9ರವರೆಗೆ ಸಮಯವನ್ನು ವಿಸ್ತರಿಸಿದೆ ಎಂದು ತಿಳಿಸಿದ್ರು.

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದ ಮುಸ್ಲಿಮೇತರ ಅಲ್ಪ ಸಂಖ್ಯಾತರಿಗೆ ದೇಶದ ಪೌರತ್ವ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತರಿಗೆ ಭಾರತೀಯ ಪೌರತ್ವ ನೀಡಲು ಅನುಕೂಲವಾಗುವ ಸಿಎಎಯನ್ನು 2019ರ ಡಿಸೆಂಬರ್‌ನಲ್ಲಿ ಸಂಸತ್ ಅಂಗೀಕರಿಸಿತ್ತು.

ಇನ್ನು ಗೃಹ ಸಚಿವಾಲಯವು ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ಮಾತನಾಡಿದ್ದು, ದೇಶವ್ಯಾಪಿ ನೋಂದಣಿ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿದೆ.

- Advertisement -

Related news

error: Content is protected !!