- Advertisement -
- Advertisement -



ಕಾರಿನಲ್ಲಿ ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಜನರ ಗುಂಪೊಂದು ಥಳಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್ನಲ್ಲಿ ನಡೆದಿದೆ. ನಾಸಿರ್ ಶೇಖ್ ಹಾಗೂ ಅಫಾನ್ ಅಬ್ದುಲ್ ಮಜೀದ್ ಅನ್ಸಾರಿ ಎಂಬವರು ಜೂನ್ 24ರಂದು ಮುಂಬೈಗೆ ಪ್ರಯಾಣಿಸುತ್ತಿದ್ದರು. ಅವರನ್ನು ಸಿನ್ನಾರ್ ಘೋಷಿ ಹೆದ್ದಾರಿಯಲ್ಲಿದ್ದಾಗ ಅವರ ಕಾರನ್ನು ತಪಾಸಣೆಗಾಗಿ ತಡೆಯಲಾಗಿತ್ತು.
ಕಾರಿನಲ್ಲಿ ಗೋಮಾಂಸ ಪತ್ತೆಯಾದ ಬಳಿಕ 10 ರಿಂದ 15 ಮಂದಿ ಅಪರಿಚಿತರು ಕಬ್ಬಿಣದ ರಾಡ್ ಹಾಗೂ ದೊಣ್ಣೆಗಳಿಂದ ಅವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದರು. ಇಬ್ಬರಲ್ಲಿ ಒಬ್ಬರು ಸಾವನ್ನಪ್ಪಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ.
- Advertisement -